ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಾಲಿಕೆ ನೀರಿನ ವಿಚಾರದಲ್ಲಿ ಬಡ್ಡಿ ದಂಧೆ ಮಾಡುತ್ತಿದೆ: ಚಿಂಚೋರೆ ಆರೋಪ

ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಸುಮಾರು 200 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿ ಇದ್ದು, ಸರ್ಕಾರ ಬಜೆಟ್ ನಲ್ಲಿ ಅದನ್ನು ಮನ್ನಾ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಬಿಲ್ ಬಾಕಿ ಸುಮಾರು 50 ಕೋಟಿಯಷ್ಟಿದ್ದು ಅದಕ್ಕೆ 150 ಕೋಟಿ ರೂಪಾಯಿ ಬಡ್ಡಿಯೇ ಆಗಿದೆ. ಕೊರೊನಾ ಸಂದರ್ಭದಲ್ಲಿ ಸರ್ಕಾರಕ್ಕೇನು ಇದು ಹೊರೆಯಲ್ಲ. ಬರುವ ಬಜೆಟ್ ನಲ್ಲಿ ಜಿಲ್ಲಾ ಮಂತ್ರಿಗಳು ಮುತುವರ್ಜಿ ವಹಿಸಿ ಈ ನೀರಿನ ಬಿಲ್ ನ್ನು ಮನ್ನಾ ಮಾಡಲು ಸರ್ಕಾರಕ್ಕೆ ಮನವರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಸುಮಾರು 1,42000 ನಳಗಳಿಗೆ ನೀರಿನ ಕಲೆಕ್ಷನ್ ಇದೆ. ಒಮ್ಮೆ ಬಿಲ್ ಮೇಲಿನ ಬಡ್ಡಿ ಮನ್ನಾ ಎಂದು ಹೇಳಲಾಗಿತ್ತು. ಆದರೆ, ಕೆಲ ತಾಂತ್ರಿಕ ದೋಷಗಳಿಂದ ಅದು ಹಾಗೇ ಮುಂದುವರೆದುಕೊಂಡು ಇದೀಗ ದೊಡ್ಡ ಮೊತ್ತವಾಗಿ ಬೆಳೆದಿದೆ. 2015ರಲ್ಲಿ 5987 ಸಾವಿರ ಬಿಲ್ ಇದ್ದದ್ದು ಇದೀಗ ಆ ಬಿಲ್ ಬಡ್ಡಿ ಅಸಲು ಸೇರಿ 45000 ಕ್ಕೆ ಬಂದು ನಿಂತಿದೆ. ನೀರಿನ ಬಿಲ್ ಕೊಡುವವರು ಕೂಡ ಸರಿಯಾಗಿ ಬಿಲ್ ಕೊಡುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಬಿಲ್ ನೀಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದರು.

ಒಂದು ವಾರ್ಡ್ ನಲ್ಲಿ 6 ಕೋಟಿ, 15 ಕೋಟಿಯಷ್ಟು ನೀರಿನ ಕರ ಬಾಕಿ ಇದೆ. ಬರುವ ದಿನಗಳಲ್ಲಿ ಈ ಜಲಮಂಡಳಿಯನ್ನು ಎಲ್ ಆ್ಯಂಡ್ ಟಿ ಗೆ ಹಸ್ತಾಂತರ ಮಾಡಲಾಗುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಅಷ್ಟರೊಳಗಾಗಿ ಈ ಬಾಕಿ ಮೊತ್ತವನ್ನು ಸರ್ಕಾರ ಮನ್ನಾ ಮಾಡಬೇಕು. ಇಲ್ಲದೇ ಹೋದರೆ ಧಾರವಾಡದಿಂದ ಎಲ್ಲ ನೀರು ಬಳಕೆದಾರರೊಂದಿಗೆ ಸಚಿವ ಜಗದೀಶ ಶೆಟ್ಟರ್ ಅವರ ಮನೆಯವರೆಗೂ ಪಾದಯಾತ್ರೆ ನಡೆಸಿ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಚಿಂಚೋರೆ ಎಚ್ಚರಿಸಿದರು.

ಸರ್ಕಾರ ಮೀಟರ್ ಬಡ್ಡಿಗೆ ಕಡಿವಾಣ ಹಾಕುತ್ತಿದೆ. ಆದರೆ, ಪಾಲಿಕೆ ನೀರಿನ ವಿಚಾರದಲ್ಲಿ ಬಡ್ಡಿ ದಂಧೆ ನಡೆಸುವುದರೊಂದಿಗೆ ಮೀಟರ್ ಬಡ್ಡಿ ದಂಧೆ ಕೂಡ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

Edited By : Manjunath H D
Kshetra Samachara

Kshetra Samachara

16/02/2021 01:33 pm

Cinque Terre

12.58 K

Cinque Terre

1

ಸಂಬಂಧಿತ ಸುದ್ದಿ