ನವಲಗುಂದ: ಬೇರು ಮಟ್ಟದಲ್ಲಿ ಆರ್‌ಎಸ್‌ಎಸ್ ಸಂಘಟನೆ ಕಟ್ಟಿ ಬೆಳೆಸಿದ್ದ ಹಿರಿಯ ಮುಖಂಡ ಮಾಧವರಾವ ಆನೆಗುಂದಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ನವಲಗುಂದ ಆರ್ಯ ವೈಶ್ಯ ಸಮಾಜದ ಹಿರಿಯ ಚೇತನ, ನವಲಗುಂದ ನಗರದ ಸಮಸ್ತ ಜನರ ಆತ್ಮೀಯ ಬಂಧು, ಸಮಾಜ ಸೇವಕರು, ಪರಿಸರ ಪ್ರೇಮಿಯೂ ಆಗಿದ್ದ ಮಾಧವರಾವ್ ಅವರ ನಿಧನದಿಂದ ನವಲಗುಂದ ಭಾಗದ ಜನಸಂಘಕ್ಕೆ ತುಂಬಲಾರದ ನಷ್ಟವಾಗಿದೆ. ತೀರಾ ಇತ್ತೀಚಿನವರೆಗೂ ತಮ್ಮ ಸಾಮಾಜಿಕ ಬದುಕಿನಲ್ಲಿ ಹೆಚ್ಚು ಚಟುವಟಿಕೆ ಹಾಗೂ ಕ್ರಿಯಾಶೀಲರಾಗಿದ್ದ ಅವರು 'ನವಲಗುಂದ ಕಾಕಾ' ಎಂದೇ ಪರಿಚಿತರಾಗಿದ್ದರು.
Kshetra Samachara
15/02/2021 10:43 pm