ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಿಪಿಎಲ್ ಕಾರ್ಡ್ ರದ್ದಾದ್ರೇ ಜನಾಂದೋಲನ - ರಮೇಶ್ ಕೊಪ್ಪದ

ಕುಂದಗೋಳ : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಶ್ರೀಮಂತವಾಗಿದೆ ಹೀಗಾಗಿ ಅದು ಬಡವರ ಮೂಲೆ ಗುಂಪಿನ ನಿರ್ಧಾರಕ್ಕೆ ಸಜ್ಜಾಗಿದೆ ಎಂದು ಕಾಂಗ್ರೆಸ್ ದುರೀಣ ರಮೇಶ್ ಕೊಪ್ಪದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಅವರು ಕುಂದಗೋಳ ಪಟ್ಟಣದಲ್ಲಿ ಸುದ್ಧಿಗೊಷ್ಠಿ ಏರ್ಪಡಿಸಿ ಮಾತನಾಡಿ ಸಚಿವ ಉಮೇಶ್ ಕತ್ತಿ ಅವರು ಬೈಕ್,ಟಿವಿ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ರದ್ದು ಎಂಬ ಆದೇಶ ನಾಳೆ ಬಡವರನ್ನು ಉಪವಾಸ ಮಾಡುವುದರಲ್ಲಿ ಸಂಶಯವಿಲ್ಲ. ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಬೊಬ್ಬೆ ಹೊಡೆಯುತ್ತೆ, ಆಧುನಿಕ ಯುಗದಲ್ಲಿ ಕನಿಷ್ಠ ಟಿವಿ ಮೋಟಾರ್ ಸೈಕಲ್ ಬಡವನ ಮನೆಗೆ ಬೇಡ್ವಾ ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೇ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಂದಿರುವ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಲು ಈ ಕುತಂತ್ರ ತಂದಿದ್ದೀರಿ. ಬಿಪಿಎಲ್ ಕಾರ್ಡ್ ಇರುವ ಆರ್ಥಿಕವಾಗಿ ಹಿಂದುಳಿದವರೇ ಹೊರತು ಸಬಲರಲ್ಲ ಅದನ್ನು ಸರ್ಕಾರವೇ ಮೊದ್ಲೇ ಗಮನಿಸಿ ಕಾರ್ಡ್ ನೀಡಿದೆ ಎಂದರು.

ಶೀಘ್ರವೇ ಈ ಕಾಯ್ದೆ ಹೇಳಿಕೆ ಮರಳಿ ಪಡೆಯದಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕುಂದಗೋಳ ಪಟ್ಟಣದಿಂದಲೇ ಜನಾಂದೋಲನ ಆರಂಭಿಸಿ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ್ ಗಂಗಾಯಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೃತಿ ಸಾಲ್ಮನಿ, ಕಾಂಗ್ರೆಸ್ ಮುಖಂಡ ಲಕ್ಷ್ಮಣ ರಂಗನಾಯ್ಕರ್, ಕಾಂಗ್ರೆಸ್ ಮುಖಂಡ ಮೆಹಬೂಬ್ ಸಾಬ್ ಪೋತೆಖಾನ್, ಪ.ಪಂ ಸದಸ್ಯ ಬಸವರಾಜ ತಳವಾರ, ಉಮೇಶ್ ಸಾಲ್ಮನಿ, ಸಲೀಂ ಕಡ್ಲಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

15/02/2021 08:51 pm

Cinque Terre

17.68 K

Cinque Terre

1

ಸಂಬಂಧಿತ ಸುದ್ದಿ