ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ಸಿಬ್ಬಂದಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಕಳೆದ ಜನೇವರಿ 31 ರಂದು ಅಂಕೋಲಾ ಬಳಿ ರಸ್ತೆ ಅಪಘಾತದಲ್ಲಿ, ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಉದ್ಯೋಗಿಗಳು ಸಾವನ್ನಪ್ಪಿದ್ದರು.
ಈ ಅಪಘಾತ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿ ಮೃತಪಟ್ಟ ಇಬ್ಬರೂ ಮಹಿಳಾ ಉದ್ಯೋಗಿಗಳ ಕುಟುಂಬಸ್ಥರು ಭಜರಂಗದಳ ಕಾರ್ಯಕರ್ತರೊಂದಿಗೆ ಕೃಷಿ ವಿವಿ ಕುಲಪತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೃಷಿ ವಿವಿ ಉಪಕುಲಪತಿ ವಿರುದ್ಧ ಕುಟುಂಬಸ್ಥರು ಕಿಡಿ ಕಾರಿದ್ದು, ಸಾವನ್ನಪ್ಪಿದ ಇಬ್ಬರೂ ಮಹಿಳಾ ನೌಕರರ ಕುಟುಂಬಕ್ಕೆ ಪರಿಹಾರ ನೀಡಬೇಕು. ಆ ಕುಟಂಬದ ಒಬ್ಬರು ಸದಸ್ಯರಿಗೆ ಕಾಯಂ ನೌಕರಿ ನೀಡಬೇಕು ಹಾಗೂ ವಿಸಿ ಆಪ್ತ ಕಾರ್ಯದರ್ಶಿ ಎಂ.ಎ.ಮುಲ್ಲಾ, ಉಳವಪ್ಪ ಮೇಸ್ತ್ರಿ ಅವರನ್ನು ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಮುಲ್ಲಾ ಮತ್ತು ಮೇಸ್ತ್ರಿ ಅವರನ್ನು ಕರೆಸಿ ವಿಚಾರಣೆ ಮಾಡಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಎಂದು ವಿಸಿ ಮತ್ತು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.
ನಂತರ ಭಜರಂಗದಳದ ಕಾರ್ಯಕರ್ತರು ಡಿಸಿ ಕಚೇರಿ ಎದುರಿಗೂ ಪ್ರತಿಭಟನೆ ನಡೆಸಿದರು.
Kshetra Samachara
15/02/2021 08:00 pm