ಕುಂದಗೋಳ : ಜನರಿಂದ ಆರ್ಶಿವಾದ ಪಡೆದು ಆಯ್ಕೆಯಾದವರು ಜನ ಸೇವೆಗೆ ತಮ್ಮ ಜೀವನವನ್ನು ಸಮರ್ಪಣೆ ಮಾಡಬೇಕು ಅಂದಾಗ ಮಾತ್ರ ಒಂದು ಊರು ಒಂದು ಪಟ್ಟಣ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿನವ ಕಲ್ಯಾಣಪುರ ಬಸವಣ್ಣನವರು ಹೇಳಿದರು.
ಅವರು ಕುಂದಗೋಳ ಪಟ್ಟಣದ ವಾರ್ಡ್ 11ರಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಭುವನೇಶ್ವರಿ ಕವಲಗೇರಿ ಅವರ ಜನ ಸಂಪರ್ಕ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಪಟ್ಟಣದ ಅಭಿವೃದ್ಧಿಗೆ ನಿಮ್ಮದೆ ಆದ ಕೊಡುಗೆ ಕೊಡಿ ಎಂದರು.
ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಮಾತನಾಡಿ ಈ ಬಾರಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ್ದು ಅಧ್ಯಕ್ಷ ಉಪಾಧ್ಯಕ್ಷರ ಸಲಹೆ ಪಡೆದು ಜನರು ತಮ್ಮ ಕಾರ್ಯ ಮಾಡಿಕೊಳ್ಳಿ ಈ ಜನಸಂಪರ್ಕ ಕಚೇರಿಗೆ ಇಂದಿನಿಂದ ಬಂದು ಅವರನ್ನು ಕಾಣಿರಿ ಎಂದರು.
ಈ ವೇಳೆ ಕಲ್ಯಾಣಪುರ ಬಸವಣ್ಣಜ್ಜನವರಿಗೆ ಹಿರಿಯರು ಸನ್ಮಾನ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ, ಜಿಲ್ಲಾ ಉಪಾಧ್ಯಕ್ಷ ದಾನಪ್ಪ ಗಂಗಾಯಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಈಶ್ವರಪ್ವ ಗಂಗಾಯಿ, ಪ.ಪಂ ವಾಸು ಗಂಗಾಯಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ಗೋಂದಕರ್ ಉಪಸ್ಥಿತರಿದ್ದರು.
Kshetra Samachara
13/02/2021 12:22 pm