ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಭಾಪತಿ ಬಸವರಾಜ ಹೊರಟ್ಟಿಗೆ ಅದ್ದೂರಿ ಸ್ವಾಗತ: ಇತಿಹಾಸ ಸೃಷ್ಟಿಸುವ ಅಧಿಕಾರದ ಭರವಸೆ ನೀಡಿದ ಹೊರಟ್ಟಿ

ಹುಬ್ಬಳ್ಳಿ: ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿ ಹುಬ್ಬಳ್ಳಿಗೆ ಆಗಮಿಸಿದ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತಾಲೂಕಾಡಳಿತದಿಂದ ಹಾಗೂ ಬಸವರಾಜ ಹೊರಟ್ಟಿ ಬೆಂಬಲಿಗರಿಂದ ಹುಬ್ಬಳ್ಳಿ ಗಬ್ಬೂರ ಬೈಪಾಸ್ ಬಳಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಇದೇ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ವಿಧಾನ ಪರಿಷತ್ ಇತಿಹಾಸದಲ್ಲಿಯೇ ಬಸವರಾಜ ಹೊರಟ್ಟಿ ಎಂಬುವಂತ ಸಭಾಪತಿ ಇದ್ದರೂ ಎನ್ನುವಂತೆ ಅಧಿಕಾರ ನಡೆಸುತ್ತೇನೆ.ಅಲ್ಲದೇ ಪರಿಷತ್ ಕಲಾಪದಲ್ಲಿ ಈ ಹಿಂದೆ ನಡೆದ ಕೆಲವು ಅಹಿತಕರ ಘಟನೆಗಳಿಂದ ಬೇಜಾರಾಗಿದೆ.ಆದ್ದರಿಂದ ಕಟ್ಟುನಿಟ್ಟಾಗಿ ವಿಧಾನ ಪರಿಷತ್ ಕಲಾಪಗಳನ್ನು ನಡೆಸಲಾಗುತ್ತದೆ ಎಂದರು.

ಇನ್ನೂ ಕಲಾಪದಲ್ಲಿ ಯಾರು ಕೂಡ ಮೊಬೈಲ್ ತೆಗೆದುಕೊಂಡು ಹೋಗದಂತೆ ತೀರ್ಮಾನ ಕೈಗೊಂಡು ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು..

ಮಾಧ್ಯಮಕ್ಕೆ ಕಲಾಪದಲ್ಲಿ ಅನುಮತಿ ಇಲ್ಲದಿರುವುದನ್ನು ನಾನು ಖಂಡಿಸುತ್ತೇನೆ ನಾವು ಕಲಾಪದಲ್ಲಿ ಜನರ ಬಗ್ಗೆ ಚರ್ಚೆ ಮಾಡುವುದರಿಂದ ಮಾಧ್ಯಮಗಳನ್ನು ಹೊರಗಿಟ್ಟು ಚರ್ಚೆ ಮಾಡುವುದು ಸರಿಯಲ್ಲ ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ವಿಧಾನ ಪರಿಷತ್ ಕಲಾಪದಲ್ಲಿ ಪ್ರವೇಶ ನೀಡುವ ಭರವಸೆ ವ್ಯಕ್ತಪಡಿಸಿದ ಅವರು,ಹು-ಧಾ ಅವಳಿನಗರದ ಅಭಿವೃದ್ಧಿಗೆ ಶಾಸಕರೊಂದಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಮಾಡಿ ಅವಳಿನಗರದ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ ಎಂದರು.

Edited By : Manjunath H D
Kshetra Samachara

Kshetra Samachara

12/02/2021 06:26 pm

Cinque Terre

40.76 K

Cinque Terre

1

ಸಂಬಂಧಿತ ಸುದ್ದಿ