ಅಣ್ಣಿಗೇರಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಹುಬ್ಬಳ್ಳಿಯಿಂದ ತಮ್ಮ ಕ್ಷೇತ್ರವಾದ ಬಾದಾಮಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿರುವ ತಮ್ಮ ವಾಹನದ ಎಸ್ಕಾರ್ಟ್ ಚಾಲಕ ಶರೀಫ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಅವರು ಗ್ರಾಮಕ್ಕೆ ಆಗಮಿಸುವುದು ತಿಳಿಯುತ್ತಿದ್ದಂತೆ ಶಲವಡಿ ಗ್ರಾಮಸ್ಥರು ಹಾಗೂ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಜಮಾಯಿಸಿದ್ದರು.
Kshetra Samachara
11/02/2021 08:23 pm