ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೆ ಆರ್ ಎಸ್ ಪಕ್ಷದಿಂದ "ಲಂಚಮುಕ್ತ ಕರ್ನಾಟಕ" ಅಭಿಯಾನ

ಕಲಘಟಗಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕಲಘಟಗಿಯಲ್ಲಿ "ಲಂಚಮುಕ್ತ ಕರ್ನಾಟಕ" ಅಭಿಯಾನ ಗುರುವಾರ ಹಮ್ಮಿಕೊಳ್ಳಲಾಗಿತ್ತು."ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ ಅಭಿಯಾನ‌‌ ಮಾಡಲಾಯಿತು.ಕಲಘಟಗಿಯಲ್ಲಿನ ಕಂದಾಯ ‌ಇಲಾಖೆ,ಸಬ್-ರಿಜಿಸ್ಟ್ರಾರ್,ತಾಲೂಕಾ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿ "ಲಂಚಮುಕ್ತ ಕರ್ನಾಟಕ" ಅಭಿಯಾನದ ಕುರಿತು ಅಧಿಕಾರಿಗಳಿಗೆ ಮನವಿ ನೀಡಿದರು.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು "ಸಂಬಳ ನನ್ನ ಹಕ್ಕು, ಕೆಲಸ ನನ್ನ ಮರ್ಜಿ, ಲಂಚ ನನಗಿಷ್ಟ ಬಂದಷ್ಟು" ಎನ್ನುವ ಧೋರಣೆ ತೋರಿಸುತ್ತಾ, ಸಾರ್ವಜನಿಕರ ಕೆಲಸವನ್ನು ಸಕಾಲದಲ್ಲಿ ಮಾಡಿಕೊಡದೆ, ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು

ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ ಜಕ್ಕಣ್ಣವರ,ಚಂದ್ರಶೇಖರ ಮಠದ,ಸುಮಿತ್ರಾ ಹಳ್ಳಿಕೆರಿ,ಅರವಿಂದ ಖಜಾಂಚಿ, ಸೋಮಸುಂದರ, ನಿಂಗಮ್ಮ ಸವಣೂರು ಹಾಗೂ ಕೆ ಆರ್ ಎಸ್ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

11/02/2021 02:17 pm

Cinque Terre

33.97 K

Cinque Terre

2

ಸಂಬಂಧಿತ ಸುದ್ದಿ