ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ನೂತನ ತಾಲೂಕು ಪಂಚಾಯಿತಿ ಪ್ರಥಮ ಸಭೆಗೆ ಕ್ಷಣಗಣನೆ

ಅಣ್ಣಿಗೇರಿ : ಪಟ್ಟಣದಲ್ಲಿ ಎರಡು ಬಾರಿ ಉದ್ಘಾಟನೆಗೊಂಡ ನೂತನ ತಾಲೂಕಿನ ತಾಲ್ಲೂಕು ಪಂಚಾಯಿತಿಯ ಪ್ರಥಮ ಸಭೆಗೆ ಇಂದು ಮುಹೂರ್ತ ಫಿಕ್ಸ ಆಗಿ ಸಭೆಗೆ ಸಜ್ಜಾಗುತ್ತಿದೆ.

ಹೌದು.. ಕಳೆದ ನಾಲ್ಕು ತಿಂಗಳ ಹಿಂದೆ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ತಾ.ಪಂ ಅಧ್ಯಕ್ಷ ಮಲ್ಲರಡ್ಡಿ ಕುರಹಟ್ಟಿ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಉದ್ಘಾಟನೆಗೊಂಡಿತ್ತು. ಆದರೆ ಇದು ಸರ್ಕಾರದ ನಿಯಮಾವಳಿ ಪ್ರಕಾರ ಉದ್ಘಾಟನೆ ಗೊಂಡಿಲ್ಲ ಮತ್ತು ಕಾನೂನುಬಾಹಿರವಾಗಿದೆ ಎಂದು ಹಾಲಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಇದನ್ನು ತಿರಸ್ಕರಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶಟ್ಟರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಕಳೆದ ತಿಂಗಳು ಪುನ: ನೂತನ ತಾ.ಪಂ ಅಧ್ಯಕ್ಷ ದೇವೆಂದ್ರಪ್ಪ ರೋಣದ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯಿತು. ಎರಡು ಬಾರಿ ಉದ್ಘಾಟನೆಗೊಂಡ ತಾ.ಪಂ ಸರ್ವ ಸದಸ್ಯರ ಸಭೆ ಇಂದು ನೂತನ ತಾ.ಪಂ ಕಾರ್ಯಾಲಯದಲ್ಲಿ ಇನ್ನೇನು ಕೆಲವೇ ಕ್ಷಣದಲ್ಲಿ ಜರುಗಲಿದೆ.

Edited By : Nagaraj Tulugeri
Kshetra Samachara

Kshetra Samachara

09/02/2021 11:32 am

Cinque Terre

21.63 K

Cinque Terre

1

ಸಂಬಂಧಿತ ಸುದ್ದಿ