ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಗೆ 35 ವರ್ಷಗಳ ಹಿಂದೆಯೇ ಮೂರು ಸಾವಿರ ಮಠದ ಆಸ್ತಿಯನ್ನು ನೀಡಲಾಗಿದೆ. ಈ ಹಿಂದಿನ ಸ್ವಾಮೀಜಿಗಳು ಆಸ್ತಿಯನ್ನು ಬಿಟ್ಟು ಕೊಟ್ಟಿದ್ದಾರೆ. ದಿಂಗಾಲೇಶ್ವರ ಶ್ರೀಗಳು ಪ್ರತಿ ಹೆಜ್ಜೆಯಲ್ಲಿ ತಪ್ಪುತ್ತಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ದಿಂಗಾಲೇಶ್ವರ ಸ್ವಾಮೀಜಿ ವಿರುದ್ದ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಮೂರುಸಾವಿರ ಮಠಕ್ಕೆ ಅವರೇ ಮುಂದಿನ ಸ್ವಾಮೀಜಿಯಂದು ಶ್ರೀಗಳ ಹೇಳುತ್ತಿದ್ದಾರೆ.ದಿಂಗಾಲೇಶ್ವರ ಶ್ರೀಗಳು ಬಾಲೇಹೊಸರು ಮಠದ 1 ಕೋಟಿ 30 ಲಕ್ಷ ರೂಪಾಯಿ ಹಣವನ್ನು ಮೂರು ಸಾವಿರ ಮಠಕ್ಕೆ ಖರ್ಚು ಮಾಡಿದ್ದೇನೆ ಎನ್ನುತ್ತಿದ್ದಾರೆ. ಆ ಮಠದ ಹಣವನ್ನು ಈ ಮಠಕ್ಕೆ ಖರ್ಚು ಮಾಡುವ ಅಧಿಕಾರವನ್ನು ದಿಂಗಾಲೇಶ್ವರ ಶ್ರೀಗಳಿಗೆ ಯಾರು ಕೊಟ್ಟರು.ಮೂರು ಸಾವಿರ ಮಠಕ್ಕೆ ಒಬ್ಬರೇ ಸ್ವಾಮೀಜಿಗಳು.ಕೆಎಲ್‌ಇ ಸಂಸ್ಥೆಗೆ ನೀಡಲಾದ ಮೂರು ಸಾವಿರ ಮಠದ ಭೂಮಿಯ ಬೆಲೆ 40 ಲಕ್ಷ ಆಗುತ್ತದೆ. ದಿಂಗಾಲೇಶ್ವರ ಶ್ರೀಗಳು 500 ಕೋಟಿ ರೂಪಾಯಿ ಎಂದು ಹೇಳುತ್ತಿದ್ದಾರೆ. ದಿಂಗಾಲೇಶ್ವರ ಶ್ರೀಗಳಿಗೆ ನಾ ಇವತ್ತು ಕೇಳುತ್ತೇನೆ ನೀವು 100 ಕೋಟಿ ರೂಪಾಯಿ ಕೊಟ್ಟುಬಿಡಿ, ಮಠದ ಆಸ್ತಿಯನ್ನು ಮಠಕ್ಕೆ ನಾನು ಬಿಟ್ಟು ಕೊಡಿಸುತ್ತೇನೆ. ಮೂರು ಸಾವಿರ ಮಠದ ಸ್ವಾಮೀಜಿಗಳಿಗೆ ಮತ್ತು ಪ್ರಭಾಕರ್ ಕೊರೆಯವರಿಗೆ ರೀಕ್ವೆಸ್ಟ್ ಮಾಡಿ ಆಸ್ತಿ ಬಿಡಿಸಿಕೊಡುತ್ತೇನೆ. ಈ ಇಬ್ಬರು ಸ್ವಾಮೀಜಿಗಳು ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕು.ಇದಕ್ಕೆ ನಮ್ಮ ಸಮಾಜ ಒಪ್ಪುತ್ತದೆ, ಅಂದಾಗ ಮಾತ್ರ ಮೂರು ಸಾವಿರ ಮಠದ ವಿವಾದ ಅಂತ್ಯವಾಗಲು ಸಾಧ್ಯ ಎಂದರು.
ಮೂಜಗು ಶ್ರೀ ಆಡಳಿತ ಮಠ ನಡೆಸಲು ವಿಫಲ: ಹುಬ್ಬಳ್ಳಿಯ ಮೂರು ಸಾವಿರ ಮಠದ ಮುಜಗೂ ಶ್ರೀಗಳು ಸಮರ್ಪಕವಾಗಿ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ.ಮೂಜಗು ಶ್ರೀಗಳು ಯಾವುದೇ ಭಕ್ತರ ಕೈಗೆ ಸಿಗುತ್ತಿಲ್ಲ.ಭಕ್ತರ ಜೊತೆ ನಿಂತು ಮಾತನಾಡುವ ಸೌಜನ್ಯವನ್ನ ತೋರಿಸುತ್ತಿಲ್ಲ ಎಂದು ಸ್ಬಾಮೀಜಿಗಳ ವಿರುದ್ದ ವಾಗ್ದಾಳಿ ನಡೆಸಿದರು.
ದಿಂಗಾಲೇಶ್ವರ ಶ್ರೀಗಳನ್ನು ಪೀಠಾಧಿಪತಿ ಮಾಡಲು ಮೂಜಗು ಶ್ರೀಗಳು ಒಪ್ಪಿಗೆ ಸೂಚಿಸಿದ್ದರು. ನಾನು ಉನ್ನತ ಮಟ್ಟದ ಸಮಿತಿಯಲ್ಲಿರುವಾಗ ಮಠದ ಅಭಿವೃದ್ಧಿ ಬಗ್ಗೆ ಸಭೆ ನಡೆಸಿ ಎಂದಾಗ ಯಾರೂ ಮುಂದೆ ಬರಲಿಲ್ಲ. ಈ ಸ್ವಾಮೀಜಿಗಳು ಯಾವಾಗ ನೋಡಿದರು ಅಳತಾನೇ ಇರುತ್ತಿದ್ದರು.ಸ್ವಾಮೀಜಿಗಳು ಸಾಲದ ಬಗ್ಗೆ ದೊಡ್ಡ ದೊಡ್ಡ ಲಿಸ್ಟ್ ಕೊಡುತ್ತಿದ್ದರು.ಇದರಿಂದ ನಾ ಬೇಸತ್ತು ಉನ್ನತ ಮಟ್ಟದ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.ಅಲ್ಲಿಂದ ಇಲ್ಲಿಯವರೆಗೂ ಆ ಮಠಕ್ಕೆ ಕಾಲಿಟ್ಟಿಲ್ಲ, ನಾನು ಮಠದ ಭಕ್ತ ಅಷ್ಟೇ...
ದಿಂಗಾಲೇಶ್ವರ ಶ್ರೀಗಳಿಗೆ ಭಾಷೆ ಮೇಲೆ ಹಿಡಿತ ಬೇಕು: ದಿಂಗಾಲೇಶ್ವರ ಶ್ರೀಗಳು ಕೀಳುಮಟ್ಟದ ರಾಜಕಾರಣಿಗಳು ಎನ್ನುತ್ತಿದ್ದಾರೆ.ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದು ನಾವಲ್ಲ, ಮೂಜಗು ಶ್ರೀಗಳು ಸಮಿತಿ ರಚೆನೆ ಮಾಡಿದ್ದಾರೆ.ಉನ್ನತ ಮಟ್ಟದ ಸಮಿತಿ ರಚನೆಯಾಗಿದ್ದು ನಮ್ಮಿಂದಲ್ಲ, ಸ್ವಾಮೀಜಿಗಳಿಂದ. ನಾವು ಯಾರು ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ಹೊಕ್ಕೊಂಡಿಲ್ಲಾ, ಅವರೇ ಒತ್ತಾಯ ಪೂರ್ವಕ ಮಾಡಿದ್ದು. ಇವತ್ತು ಕಾವಿಧಾರಿಗಳು ಮಾತನಾಡುವುದನ್ನು ಕಲಿಬೇಕಾಗಿದೆ. ಜವಬ್ದಾರಿಯುತವಾಗಿ, ಕೆಟ್ಟ ಭಾಷೆ ಗಳನ್ನ ಬಳಸದೆ ಮಾತನಾಡಬೇಕು. ಸಿಎಮ್‌ಗೂ ಏಕವಚನದಲ್ಲಿ ಮಾತನಾಡುತ್ತಿದ್ದಾರೆ, ನಮ್ಮಿಂದ ಸರ್ಕಾರ, ಸರ್ಕಾರ ಕೆಡವುತ್ತೆವೆ ಎನ್ನುತ್ತಿದ್ದಾರೆ. ಈ ತರಹದ ಬೆಳವಣಿಗೆಯಿಂದ ಕರ್ನಾಟಕ ಜನತೆಯ ಮನಸ್ಸು ಬಹಳ ನೊಂದಿದೆ. ಯಾವುದೇ ಹೋರಾಟಗಳು ಲಕ್ಷ್ಮಣ ರೇಖೆ ದಾಟಬಾರದು ಎಂದರು.
Kshetra Samachara
08/02/2021 02:49 pm