ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ : ತಹಶೀಲ್ದಾರ್ ಕಚೇರಿ ಎದುರೇ ಅವ್ಯವಸ್ಥೆ

ನವಲಗುಂದ : ಪಟ್ಟಣದ ತಹಸೀಲ್ದಾರ್ ಕಚೇರಿ ಎದುರೇ ಪೈಪ್ ಲೈನ್ ಗಾಗಿ ಕಳೆದ ಕೆಲವು ದಿನಗಳ ಹಿಂದೆ ತಗ್ಗು ತೊಡಲಾಗಿತ್ತು, ಆದರೆ ಈಗ ತೋಡಿದ ತಗ್ಗಿಗೆ ಕೇವಲ ಮಣ್ಣು ಹಾಕಿ ಬೇಕಾಬಿಟ್ಟಿ ಬಿಡಲಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

ಇದು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತಿದೆ.

ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಮಾಡಿ ಕೊಡಬೇಕಿದೆ. ಹಾಕಿದ ಅಡ್ಡಾ ದಿಡ್ಡಿ ಮಣ್ಣನು ಸಮತಟ್ಟಾಗಿ ಮಾಡಿ, ಸರಿಯಾದ ಡಾಂಬರೀಕರಣ ಮಾಡಬೇಕಿದೆ. ಸಮಸ್ಯೆ ಚಿಕ್ಕದು ಅನಿಸಿದರೂ ಪರಿಣಾಮ ದೊಡ್ಡದಾಗುವ ಸಾಧ್ಯತೇಗಳಿವೆ, ಹೀಗಾಗಿ ಸಂಚರಿಸುವ ವಾಹನಗಳು ಸುರಕ್ಷಿತವಾಗಿ ಸಂಚರಿಸಲು ಅನುವು ಮಾಡಿಕೊಡಬೇಕಿದೆ. ವಿನೋದ ಇಚ್ಛಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

07/02/2021 01:40 pm

Cinque Terre

50.49 K

Cinque Terre

0

ಸಂಬಂಧಿತ ಸುದ್ದಿ