ನವಲಗುಂದ: ಕಳಸಾ ಬಂಡೂರಿ ಮಹದಾಯಿ ತೀರ್ಪು ಬಂದು ಒಂದೂವರೆ ವರ್ಷ ಕಳೆದರೂ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭ ಮಾಡಬೇಕು ಎಂದು ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಮತ್ತು ಪಕ್ಷಾತೀತ ರೈತ ಹೋರಾಟ ಸಮಿತಿ ವತಿಯಿಂದ ನವಲಗುಂದ ತಹಶೀಲ್ದಾರ್ ಅವರಿಗೆ ಮನವಿಯನ್ನು ನೀಡಲಾಯಿತು.
ಇಂದು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ತಮ್ಮ ಬೇಡಿಕೆಗಳಾದ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ನೀರು ತ್ವರಿತಗತಿಯಲ್ಲಿ ಕಾಮಗಾರಿ ಆರಂಭ ಮಾಡವುದು ಮತ್ತು ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಸೇರಿದಂತೆ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸುಚಿಸುತ್ತ ನವಲಗುಂದ ತಹಸೀಲ್ದಾರ್ ಅವರಿಗೆ ಮನವಿಯನ್ನು ನೀಡಲಾಯಿತು.
ಇನ್ನೂ ಈ ವೇಳೆ ಸುಭಾಸ್ ಚಂದ್ರಗೌಡ ಪಾಟೀಲ್, ಮಲ್ಲೇಶ್ ಉಪ್ಪಾರ್, ರವಿಗೌಡ ಪಾಟೀಲ್, ಬಸವನಗೌಡ ಫಕೀರಗೌಡ, ಈಶ್ವರಯ್ಯ ಹಿರೇಮಠ್ ಸೇರಿದಂತೆ ಹಲವು ರೈತರು ಭಾಗಿಯಾಗಿದ್ದರು.
Kshetra Samachara
06/02/2021 11:37 pm