ಕಲಘಟಗಿ: ಆತ್ಮಹತ್ಯೆಗೆ ಶರಣಾದ ತಾಲೂಕಿನ ನೆಲ್ಲಿಹರವಿ ಗ್ರಾಮದ ರೈತನ ಕುಟುಂಬಕ್ಕೆ ಸರಕಾರದ ಪರಿಹಾರವನ್ನು ಶಾಸಕ ಸಿ.ಎಂ.ನಿಂಬಣ್ಣವರ ವಿತರಿಸಿದರು.
ನೆಲ್ಲಿಹರವಿ ಗ್ರಾಮದ ರೈತ ಬಸಪ್ಪ ಅಗಸರ ಇತ್ತೀಚೆಗೆ ಸಾಲಬಾಧೆ ತಾಳಲಾರದೇ ಅತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬಕ್ಕೆ ಸರಕಾರದ ಐದು ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಅನ್ನು ಶಾಸಕರು ತಮ್ಮ ನಾಗರೀಕ ಸೇವಾ ಕೇಂದ್ರ ದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಗಂಭೀರ, ಬಿಜೆಪಿ ಅಧ್ಯಕ್ಷ ಬಸವರಾಜ ಶೆರೆವಾಡ, ಐ ಸಿ ಗೋಕುಲ, ಕಲ್ಮೇಶ ಮುಡೆಕ್ಕನವರ ಉಪಸ್ಥಿತರಿದ್ದರು.
Kshetra Samachara
06/02/2021 08:19 pm