ಧಾರವಾಡ: ಎಪಿಎಂಸಿ ಹಾಗೂ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ವಿರೋಧಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಇರುವ ಗಾಂಧಿ ಪ್ರತಿಮೆ ಎದುರು ರೈತ ಹಿತರಕ್ಷಣಾ ಪರಿವಾರದ ವತಿಯಿಂದ ನಡೆಯುತ್ತಿರುವ ನಿರಂತರ ಧರಣಿಗೆ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಸಾವಿತ್ರಿ ಗುಂಡಿ ಬೆಂಬಲ ಸೂಚಿಸಿದರು.
ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿ ಪಿ.ಎಚ್.ನೀರಲಕೇರಿ ಹಾಗೂ ಶ್ರೀಶೈಲಗೌಡ ಕಮತರ ನೇತೃತ್ವದಲ್ಲಿ ಪಕ್ಷಾತೀತವಾಗಿ ಈ ಧರಣಿ ನಡೆಯುತ್ತಿದೆ.
ಈ ಧರಣಿಗೆ ಪ್ರತಿದಿನ .ಒಂದಿಲ್ಲೊಂದು ಗ್ರಾಮದ ರೈತರು ಈ ಧರಣಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇಂದು ವಿಪ ಮಾಜಿ ಸದಸ್ಯೆ ಸಾವಿತ್ರಿ ಗುಂಡಿ ಬೆಂಬಲ ಸೂಚಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
Kshetra Samachara
05/02/2021 06:00 pm