ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಮಡೊಳ್ಳಿ ಗ್ರಾ ಪಂ.ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳೆರೆಡು ಅವಿರೋಧ

ಕುಂದಗೋಳ : ತಾಲೂಕಿನ ಕಮಡೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳೆರೆಡೂ ಇಂದು ಅವಿರೋಧವಾಗಿ ಆಯ್ಕೆ ಕಂಡವು ಒಂದೇ ಗ್ರಾಮ ಒಳಗೊಂಡಿದ್ದ ಗ್ರಾಮ ಪಂಚಾಯಿತಿ 20 ಸದಸ್ಯರ ಪೈಕಿ ಇಂದು ಚುನಾವಣೆ ಜರಗಿತು.

ಅ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಿದಾಗ ಗ್ರಾಮದ ಪಂಚಾಯಿತಿ ಸದಸ್ಯ ರಾಜಣ್ಣ ಶಿರಮಣ್ಣವರ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆ ಅವಿರೋಧವಾಯಿತು.

ಉಳಿದಂತೆ ಉಪಾಧ್ಯಕ್ಷ ಸ್ಥಾನ ಎಸ್.ಟಿ ಮೀಸಲಾತಿ ಕಂಡಿದ್ದು ಗ್ರಾಮದ ಶೇಖರ ಮರೇಪ್ಪನವರ ಅವಿರೋಧವಾಗಿ ಆಯ್ಕೆಯಾಗಿದರು. ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಗ್ರಾಮದ ಗುರು ಹಿರಿಯರು ಮತ್ತು ಪಂಚಾಯಿತಿ ಸರ್ವ ಸದಸ್ಯರು ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ತುಪ್ಪದಗೌಡ್ರ ಕಾರ್ಯದರ್ಶಿ ನದಾಫ್ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

04/02/2021 06:55 pm

Cinque Terre

9.7 K

Cinque Terre

0

ಸಂಬಂಧಿತ ಸುದ್ದಿ