ನವಲಗುಂದ: ತಾಲ್ಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮಂಗಳವಾರ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟಗೊಂಡಿದೆ.
ಈ ಕೆಳಗಿಂಣಂತಿದೆ ವಿವರ: ಅಳಗವಾಡಿ ಪಂಚಾಯ್ತಿಗೆ ಅಧ್ಯಕ್ಷರಾಗಿ ತಿಪ್ಪವ್ವ ಹರಣಶಿಕಾರಿ, ಉಪಾಧ್ಯಕ್ಷರಾಗಿ ಫಕ್ಕೀರಪ್ಪ ಕುಣೆಶೆಣ್ಣವರ, ಜಾವೂರ ಪಂಚಾಯ್ತಿಗೆ ಅಧ್ಯಕ್ಷರಾಗಿ ಶಿವಾನಂದ ಅವಡಿ, ಉಪಾಧ್ಯಕ್ಷರಾಗಿ ಯಲ್ಲವ್ವ ನಾಯ್ಕರ್, ಗುಮ್ಮಗೋಳ ಪಂಚಾಯ್ತಿಗೆ ಅಧ್ಯಕ್ಷರಾಗಿ ಮೀನಾಕ್ಷಿ ವಡ್ಡರ, ಉಪಾಧ್ಯಕ್ಷರಾಗಿ ಜ್ಯೋತಿ ಬಡಿಗೇರ, ಶಿರೂರ ಪಂಚಾಯ್ತಿಗೆ ಅಧ್ಯಕ್ಷರಾಗಿ ಈರಪ್ಪ ಕಡೆಮನಿ, ಉಪಾಧ್ಯಕ್ಷರಾಗಿ ಚೇತನಾ ದೇಸಾಯಿ, ಮೊರಬ ಪಂಚಾಯ್ತಿಗೆ ಅಧ್ಯಕ್ಷರಾಗಿ ಗಿರೀಶ ಮಾಸ್ತಿ, ಉಪಾಧ್ಯಕ್ಷರಾಗಿ ಮಂಜುಳಾ ಮಡಿವಾಳರ, ಶಿರಕೋಳ ಪಂಚಾಯ್ತಿಗೆ ಅಧ್ಯಕ್ಷರಾಗಿ ಮಹಾದೇವಿ ಗೊಬ್ಬರಗುಂಪಿ, ಉಪಾಧ್ಯಕ್ಷರಾಗಿ ಶಾರವ್ವ ಶಾಸ್ತಿಮಠ ತಿರ್ಲಾಪೂರ ಪಂಚಾಯ್ತಿಗೆ ಅಧ್ಯಕ್ಷರಾಗಿ ಪದ್ಮಾ ಮರಿಶಿದ್ದಣ್ಣವರ, ಉಪಾಧ್ಯಕ್ಷರಾಗಿ ಮಹೇಶ ಬಕ್ಕಣ್ಣವರ, ಬೆಳಹಾರ ಪಂಚಾಯ್ತಿಗೆ ಅಧ್ಯಕ್ಷರಾಗಿ ರೇಣುಕಾ ಶಲವಡಿ, ಉಪಾಧ್ಯಕ್ಷರಾಗಿ ದ್ರಾಕ್ಷಾಯಿಣಿ ಚಲವಾದಿ, ನಾಯ್ಕನೂರ ಪಂಚಾಯ್ತಿಗೆ ಅಧ್ಯಕ್ಷರಾಗಿ ಕಸ್ತೂರೆವ್ವ ರಾಯನಾಯ್ಕರ್, ಉಪಾಧ್ಯಕ್ಷರಾಗಿ ರಾಜಶೇಖರಗೌಡ ಪಾಟೀಲ, ತಡಹಾಳ ಪಂಚಾಯ್ತಿಗೆ ಅಧ್ಯಕ್ಷರಾಗಿ ಸಾವಿತ್ರವ್ವ ಕಲ್ಲನಗೌಡ್ರ, ಉಪಾಧ್ಯಕ್ಷರಾಗಿ ನಾಗವ್ವ ಮಜ್ಜಗಿ, ಗುಡಿಸಾಗರ ಪಂಚಾಯ್ತಿಗೆ ಅಧ್ಯಕ್ಷರಾಗಿ ರುಕ್ಕಯ್ಯಬೇಗಂ ಕಮಲಶನವರ , ಉಪಾಧ್ಯಕ್ಷರಾಗಿ ಚೆನ್ನಪ್ಪಗೌಡ ಹಿರೇಗೌಡರ, ಹಾಳಕುಸುಗಲ್ಲ ಪಂಚಾಯ್ತಿಗೆ ಅಧ್ಯಕ್ಷರಾಗಿ ಚಂದ್ರಶೇಖರಪ್ಪ ತಿರ್ಲಾಪೂರ, ಉಪಾಧ್ಯಕ್ಷರಾಗಿ ಕುಮಾವತಿ ನಾಯ್ಕರ್, ಹೆಬ್ಬಾಳ ಪಂಚಾಯ್ತಿಗೆ ಅಧ್ಯಕ್ಷರಾಗಿ ನಾರಾಯಣ ದೇವರಡ್ಡಿ, ಉಪಾಧ್ಯಕ್ಷರಾಗಿ, ಶಾಂತವ್ವ ಮಾಳಣ್ಣವರ ಆಯ್ಕೆಯಾಗಿದ್ದಾರೆಂದು ತಹಶೀಲ್ದಾರ್ ನವೀನ ಹುಲ್ಲೂರ ತಿಳಿಸಿದ್ದಾರೆ.
Kshetra Samachara
03/02/2021 01:02 pm