ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಭಿವೃದ್ಧಿಗೆ ಕಾಮಗಾರಿಗೆ ಶಾಸಕಿ ಪೂಜೆ ಗ್ರಾ.ಪಂ ಸದಸ್ಯರಿಗೆ ಸಲಹೆ

ಕುಂದಗೋಳ : ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯವಾಗಿ ಅರ್ಹ ಸದಸ್ಯರು ಗ್ರಾಮದ ಜವಾಬ್ದಾರಿ ಪಡೆದಿದ್ದೀರಿ ನಿಮ್ಮೂರಿನ ಸರ್ವತೋಮುಖ ಅಭಿವೃದ್ಧಿಗೆ ನೀವು ದುಡಿಯಿರಿ ಜನ ಸೇವೆ ಮಾಡಿರಿ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಬಸಾಪೂರ ಗ್ರಾಮದಲ್ಲಿ ಕಳೆದ 2018ನೇ ಸಾಲಿನ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ದುರಸ್ತಿ ಯೋಜನೆಯಲ್ಲಿ ತಾಲೂಕಿನ ಬಸಾಪೂರ ಸಂಶಿ ಮಾರ್ಗದ 30 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಗ್ರಾ.ಪಂ ಸದಸ್ಯರಿಗೆ ಸಲಹೆ ನೀಡಿ ಈಗಾಗಲೇ ಹಿಂದುಳಿದ ಕೆಲಸಗಳ ಕಾರ್ಯ ಚುರುಕಾಗಿ ನಡೆದಿದೆ. ಮುಂಬರುವ ದಿನಗಳಲ್ಲಿ ಪಂಚಾಯಿತಿ ಅನುದಾನದಲ್ಲಿ ಗ್ರಾಮ ಸುಧಾರಿಸಿ ಎಂದರು.

ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಚುನಾಯಿತರಾಗಿ ಆಯ್ಕೆಯಾದ ಸದಸ್ಯರು ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಸಾಪೂರ ಸಂಶಿ ಗ್ರಾಮಗಳ ಗುರು ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

01/02/2021 11:45 am

Cinque Terre

15.41 K

Cinque Terre

0

ಸಂಬಂಧಿತ ಸುದ್ದಿ