ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಾನ ಹೋಗ್ಲಿ ಪ್ರಾಣ ಹೋಗ್ಲಿ ಮಠದ ಉಳಿವಿಗೆ ದಿಂಗಾಲೇಶ್ವರ ಸಿದ್ಧ

ಕುಂದಗೋಳ: ಮುಖ್ಯಮಂತ್ರಿ ಯಡಿಯೂರಪ್ಪನವರು ಮಠ-ಮಾನ್ಯಗಳ ರಕ್ಷಣೆಗಾಗಿ ಅನುದಾನ ನೀಡುತ್ತಿದ್ದರೆ, ಅವರ ಸಚಿವ ಸಂಪುಟದ ಕೆಲವು ಸಚಿವರು ಹಾಗೂ ಅವರ ಕಾನೂನು ಸಲಹೆಗಾರ ಮಠದ ಆಸ್ತಿ ಕೊಳ್ಳೆಹೊಡೆಯಲು ಸಹಾಯ ಮಾಡುತ್ತಿದ್ದಾರೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು ಗಂಭೀರ ಆರೋಪ ಮಾಡಿದರು‌‌.

ಅವರು ಶನಿವಾರ ಪಟ್ಟಣದ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಠ ಮಂದಿರ ಉಳಿಸಿ ಸಮಾಜ ಬೆಳೆಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಮೂರುಸಾವಿರ ಮಠದ ಆಸ್ತಿ ಮೇಲೆ ಕೆಲವು ರಾಜಕಾರಣಿಗಳ ಹಾಗೂ ಆಡಳಿತ ಮಂಡಳಿಯವರು ಸೇರಿಕೊಂಡು ಮಠ ಹಾಳ ಮಾಡುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶಂಕರಣ್ಣ ಮುನವಳ್ಳಿ ಒಬ್ಬ ಭ್ರಷ್ಟ ವ್ಯಕ್ತಿ ಹಾಗೂ ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವರು ಸೇರಿಕೊಂಡು ಮಠವನ್ನು ಸರ್ವನಾಶ ಮಾಡುತ್ತಿದ್ದಾರೆ.

ಕೆಎಲ್ಇ ಶಿಕ್ಷಣ ಸಂಸ್ಥೆ ಸಾಕಷ್ಟು ಆರ್ಥಿಕವಾಗಿ ಸದೃಢವಾಗಿದೆ ಸಾವಿರಾರು ಎಕರೆ ಹುಬ್ಬಳ್ಳಿ ಸುತ್ತಮುತ್ತಲು ಆಸ್ತಿ ಪಾಸ್ತಿಗಳನ್ನು ಹೊಂದಿವೆ ಸಾವಿರಾರು ಕೋಟಿ ಹೊಂದಿರುವ ಸಂಸ್ಥೆಗೆ ಮಠದ ಆಸ್ತಿಯನ್ನು ನೀಡುವುದು ಎಷ್ಟು ಸೂಕ್ತ ? ಮಠದ ಆಡಳಿತ ಮಂಡಳಿಯ ಅವರು ತಮ್ಮ ಸ್ವಂತ ಆಸ್ತಿಪಾಸ್ತಿ ಇತರೆ ಶಿಕ್ಷಣ ಸಂಸ್ಥೆಗಳಿಗೆ ದಾನವಾಗಿ ನೀಡಲಿ ಎಂದು ಸವಾಲು ಹಾಕಿದರು.

ಈಗಿನ ಜಗದ್ಗುರುಗಳು ಮೂರು ಸಾವಿರ ಮಠಕ್ಕೆ ತಿಂಗಳಿಗೆ 9 ಲಕ್ಷ ಬಾಡಿಗೆ ಹಾಗೂ ಇತರ ಮೂಲದಿಂದ ಹಣ ಬರುತ್ತದೆ ಎಂದು ಹೇಳುವ ಸ್ವಾಮೀಜಿಗಳು ಆ ಹಣದಿಂದ ಮಠದಲ್ಲಿ ಅನ್ನದಾಸೋಹ ಮಾಡಿದ್ದೀರಾ ? ಅಥವಾ ಏನು ಅಭಿವೃದ್ಧಿ ಮಾಡಿದ್ದೀರಾ ? ಎಂಬುವುದು ಸಾರ್ವಜನಿಕರಿಗೆ ಬಹಿರಂಗವಾಗಬೇಕು ಮಠದ ಆದಾಯ ಇತರೆ ಮೂಲದ ಗಳಿಕೆಯೂ ಸಂಪೂರ್ಣ ಮಾಹಿತಿ ನನ್ನ ಬಳಿ ಇಲ್ಲಿ ಇದೆ ಸಮಯ ಬಂದಾಗ ಬಹಿರಂಗಪಡಿಸುತ್ತೇನೆ.

ನನಗೆ ಮೂರುಸಾವಿರಮಠದ ಉತ್ತರಾಧಿಕಾರಿಯ ದಾಹ ಇಲ್ಲ ನೀವೇ ನನ್ನನ್ನು ಕರೆದು ಉತ್ತರಾಧಿಕಾರಿಯನ್ನಾಗಿ ಮಾಡಿ ನಿಮಗೆ ಅನುಕೂಲವಾಗಿಲ್ಲ ಎಂಬುದನ್ನು ತಿಳಿದು ಕಾನೂನು ತೊಡಕು ಹಾಕುತ್ತೀರಿ, ನಿಮ್ಮ ಬ್ರ

ಭ್ರಷ್ಟಾಚಾರ ಮುಚ್ಚಿಕೊಳ್ಳಲು

ನನ್ನ ಮೇಲೆ ಇಲ್ಲದ ಸುಳ್ಳು ಆಪಾದನೆ ಹೊರಿಸುತ್ತಿದ್ದಾರೆ ನಾನು ಯಾವುದಕ್ಕೂ ಬಗ್ಗುವುದಿಲ್ಲ ಎಂದರು.

ವೇದಿಕೆ ಮೇಲೆ ಕಾಂಗ್ರೆಸ್ ಮುಖಂಡ ಅರವಿಂದ ಕಟ್ಟಗಿ, ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ, ಸ್ವಾಗತ ನಿರೂಪಣೆಯನ್ನು ವೀರೇಶ್ ಪ್ರಳಯ ಕಲ್ಮಠ ನೆರವೇರಿಸಿದರು.

Edited By : Nagesh Gaonkar
Kshetra Samachara

Kshetra Samachara

31/01/2021 01:41 pm

Cinque Terre

27.16 K

Cinque Terre

1

ಸಂಬಂಧಿತ ಸುದ್ದಿ