ಹುಬ್ಬಳ್ಳಿ: ಅವರೆಲ್ಲ ಸ್ವತಂತ್ರ ಭಾರತದ ಅವಿಭಾಜ್ಯ ಅಂಗ.ರಾಷ್ಟ್ರ ಪ್ರೇಮವನ್ನು ಎತ್ತಿ ತೋರಿಸಲು ಇವರ ಸೇವೆ ಬೇಕೆ ಬೇಕು.ಆದ್ರೇ ಇವರು ಮಾತ್ರ ಅಕ್ಷರಶಃ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಜೀವನ ನಡೆಸುತ್ತಿದ್ದಾರೆ.ಇಂತಹ ನೂರಾರು ಕೈಗಳಿಗೆ ಆಸರೆಯಾಗಲು ಧ್ವನಿಯೊಂದು ಮೊಳಗುತ್ತಿದೆ.ಅಷ್ಟಕ್ಕೂ ಸಂಕಷ್ಟಕ್ಕೆ ಸಿಲುಕಿರುವವರು ಯಾರು...? ಇವರ ಆಸರೆಗೆ ನಿಂತಿದ್ದಾದರೂ ಯಾರು ಅಂತೀರಾ ಈ ಸ್ಟೋರಿ..
ಹೀಗೆ ರಾಟಿಯ ಮುಂದೆ ಕುಳಿತುಕೊಂಡು ಧ್ವಜವನ್ನು ಹೊಲೆಯುತ್ತಿರುವ ಕಾರ್ಮಿಕರು. ಲಾಕ್ ಡೌನ್ ಸಂದರ್ಭದಲ್ಲಿ ಮಾತ್ರವಲ್ಲದೆ ಲಾಕ್ ಡೌನ್ ಅಲ್ಲದ ದಿನಗಳಿಂದಲೂ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.ಈಗ ಇಂತಹವರ ಸಹಾಯಕ್ಕೆ ನಿಂತಿದ್ದಾರೆ.ಅವಧೂತ್ ಎಂದೇ ಖ್ಯಾತಿ ಪಡೆದ ವಿನಯ ಗುರೂಜಿ. ಮಹಾತ್ಮ ಗಾಂಧೀಜಿಯವರು ಕನಸನ್ನು ಹೊತ್ತು ಕಾರ್ಯನಿರ್ವಹಿಸುತ್ತಿರು ಖಾದಿ ಗ್ರಾಮೋದ್ಯೋಗ ಕಾರ್ಮಿಕರು ತುತ್ತು ಅನ್ನಕ್ಕೂ ಹಾಹಾಕಾರ ಪಡುವಂತಾಗಿದ್ದು,ಅಧುನಿಕರಣ ಹೆಸರಿನಲ್ಲಿ ಖಾದಿ ಗ್ರಾಮೋದ್ಯೋಗ ಮೂಲೆ ಸೇರುತ್ತಿದೆ.ಈ ದಿಸೆಯಲ್ಲಿ ಖಾದಿ ಗ್ರಾಮೋದ್ಯೋಗವನ್ನು ಉತ್ತೇಜಿಸಲು ಪಣತೊಟ್ಟಿದ್ದಾರೆ.ಹೌದು..ಇಂದು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡಿದ ವಿನಯ ಗುರೂಜಿ ಖಾದಿ ಗ್ರಾಮೋದ್ಯೋಗದ ಕಾರ್ಮಿಕರಿಗೆ ಎರಡು ತಿಂಗಳ ಆಹಾರ ಕಿಟ್ ವಿತರಣೆ ಮಾಡಿದರು.
ಸ್ವದೇಶದ ತತ್ವಕ್ಕೆ ಉತ್ತೇಜನಕ್ಕೆ ನೀಡುವ ಮೂಲಕ ಗಾಂಧಿ ಕನಸು ನನಸು ಮಾಡಬೇಕು.ದೇಶದ ಏಕೈಕ ರಾಷ್ಟ್ರ ಧ್ವಜ ಉತ್ಪಾದಿಸುವ ಖಾದಿ ಕೇಂದ್ರ ಈಗ ಸಂಕಷ್ಟದಲ್ಲಿದೆ.ಈ ಹಿನ್ನಲೆಯಲ್ಲಿ ಶಹೀದ್ ದಿವಸ್' ಅಂಗವಾಗಿ ರಾಷ್ಟ್ರ ಧ್ವಜ ತಯಾರಿಕರನ್ನು ಸನ್ಮಾನಿಸುವ ಮೂಲಕ ಖಾದಿ- ಉತ್ಪನ್ನ, ಹಾಗೂ ಉತ್ಪಾದಕರಿಗೆ ಮಾನ್ಯತೆ ಸಿಗಬೇಕು ಎಂದು ವಿನಯ ಗುರೂಜಿ ಆಶಿಸಿದ್ದಾರೆ. ಅಲ್ಲದೇ ಖಾದಿ ಉಳಿವಿಗೆ ಸರ್ಕಾರ ಜೊತೆ ಮಾತುಕತೆ ನಡೆಸಲಿದ್ದೇನೆ.ಕೈಮಗ್ಗ- ಉಳಿಯಬೇಕು, ನೇಕಾರರಿಗೆ ಕನಿಷ್ಠ ವೇತನ ನಿಗದಿಯಾಗಬೇಕು.ಖಾದಿ- ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದೇವೆ ಭರವಸೆ ನೀಡಿದ್ದಾರೆ.
ದೇವಸ್ಥಾನದಲ್ಲಿ ಹುಂಡಿ ಇಟ್ಟಂತೆ- ರೈತರಿಗೆ ಹಾಗೂ ಖಾದಿ ಗ್ರಾಮೋದ್ಯೋಗದ ಕಾರ್ಮಿಕರಿಗೆ ಹುಂಡಿ ಇಡಬೇಕು. ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿಯವರ ಕನಸು ನನಸಾಗಬೇಕು ಅಲ್ಲದೇ ಹಸಿವು ಮುಕ್ತ ಭಾರತದ ಕನಸು ನನಸಾಗಬೇಕು ಎಂದರೇ ಖಾದಿ ಗ್ರಾಮೋದ್ಯೋಗದ ಏಳಿಗೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಒತ್ತಾಯಿಸಿದ್ದಾರೆ....
Kshetra Samachara
30/01/2021 08:17 pm