ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಣದ ವ್ಯಾಮೋಹ ಕಡಿಮೆ ಆದಾಗಲೇ ಇಂಡಸ್ಟ್ರಿ, ದೇವಸ್ಥಾನ ಆಗಲು ಸಾಧ್ಯ: ವಿನಯ ಗುರೂಜಿ

ಹುಬ್ಬಳ್ಳಿ: ಹಣದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೇ ಆದ್ರೆ ಹಣವೇ ಜೀವನವಲ್ಲ.ಯಾವತ್ತೂ ಹಣಕ್ಕೆ ಬೆಲೆ ಕೊಡುವುದು ಕಡಿಮೆಯಾಗುತ್ತದೆಯೋ ಅಂದೇ ಇಂಡಸ್ಟ್ರಿಗಳು ದೇವಾಲಯವಾಗಲು ಸಾಧ್ಯ ಎಂದು ಅವಧೂತ್ ವಿನಯ ಗುರೂಜಿ ಹೇಳಿದರು.

ನಗರದಲ್ಲಿಂದು ಆಯೋಜಿಸಲಾಗಿದ್ದ ಬಿಸಿನೆಸ್ ಮೀಟ್ಸ್ ವಿಸ್ಡಮ್-2021 ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,ಯಾವುದು ದಾನ ಎಂದು ನಾವು ಎಂದುಕೊಂಡಿದ್ದೇವೊ ಅದನ್ನು ಮಾರಾಟಕ್ಕೆ ಇಟ್ಟಿದ್ದೇವೆ. ವಿದ್ಯಾ ದಾನ ಎಂಬುವುದು ದೊಡ್ಡ ದಾನ ಅದನ್ನು ಈಗ ನಾವು ಬಿಸಿನೆಸ್ ಗೆ ಇಟ್ಟಿದ್ದೇವೆ. ಎಲ್ಲಿ ವ್ಯಾಪಾರದ ಮನಸ್ಥಿತಿ ಇರುತ್ತದೆಯೋ ಅಲ್ಲಿಯವರೆಗೆ ಆಧ್ಯಾತ್ಮಿಕತೆ ಅರಿವು ಆಗಲು ಸಾಧ್ಯವಿಲ್ಲ ಎಂದರು.

ಅನುಭವದಿಂದ ಬಾಳನ್ನು ಹಣ್ಣು ಮಾಡಿಕೊಳ್ಳಬೇಕು ಅದುವೇ ಆಧ್ಯಾತ್ಮಿಕತೆ. ಸ್ವಾರ್ಥದ ಬದುಕಿನಿಂದ ನಾವೆಲ್ಲರೂ ಆಧ್ಯಾತ್ಮಿಕತೆಯಿಂದ ದೂರ ಉಳಿಯುತ್ತಿದ್ದೇವೆ. ನಮ್ಮ ಹೆತ್ತ ತಂದೆ- ತಾಯಿಗೆ ತುತ್ತು ಅನ್ನ ಹಾಕದಿದ್ದರೂ ಜಾಹೀರಾತು ನೀಡಿ ಪ್ರಚಾರ ಪಡೆದುಕೊಳ್ಳುವಷ್ಟರ ಮಟ್ಟಿಗೆ ಬಾಂಧವ್ಯ ದೂರ ಸಾಗಿದೆ. ಜೀವಂತ ಇದ್ದಾಗ ತಂದೆ ತಾಯಿಗಳನ್ನು ನೋಡದವರು ಅವರ ಹೆಸರಲ್ಲಿ ಸ್ಮಾರಕ ಕಟ್ಟಿಸುವುದು. ಜೀವನ ಹಣದ ಹಿಂದೆ ಬೆನ್ನಟ್ಟಿದ ಬದುಕಿಗೆ ನಿಜವಾದ ಪ್ರೀತಿ ಅಧ್ಯಾತ್ಮ ಅರಿವಾಗುವುದಿಲ್ಲ ಎಂದರು.

ಸತ್ಯವನ್ನು ಬಿಡಬಾರದು ಹಿಂಸೆಯನ್ನು ಮಾಡಬಾರದು ಅಂದಾಗ ಮಾತ್ರ ಜೀವನದ ಸಾರ್ಥಕತೆ ಹೊಂದಲು ಸಾಧ್ಯ ಎಂದು ಅವಧೂತ್ ವಿನಯ ಗುರೂಜಿ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

30/01/2021 07:17 pm

Cinque Terre

34.31 K

Cinque Terre

0

ಸಂಬಂಧಿತ ಸುದ್ದಿ