ಕುಂದಗೋಳ : ಹಜರತ್ ಸೈಯದ್ ಖಾಜಾ ಮೈನುದ್ದಿನ್ ಚಿಸ್ತಿ ಅವರ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿರುವ ಜಿತೇಂದ್ರ ಸರಸ್ವತಿ ಸಾಧುಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕುಂದಗೋಳ ಪಟ್ಟಣದ ಮುಸ್ಲಿಂ ಸಮಾಜದವರು ಶಿರಸ್ತೇದಾರ ಮಹೇಶ್ ಶಾನಭಾಗ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತ ತಹಶೀಲ್ದಾರ ಕಚೇರಿಯ ಆವರಣಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು ಭಾರತದ ದೇಶ ಭಾವೈಕ್ಯತೆಯ ದೇಶ, ಇಲ್ಲಿ ಎಲ್ಲ ಧರ್ಮ ಮತ ಬಾಂಧವರು ಸಮಾನರಾಗಿದ್ದೇವೆ ಸಾಧು ಜಿತೇಂದ್ರ ಸರಸ್ವತಿ ಸ್ವಾಮೀಜಿಯವರು ಎಲ್ಲೋ ಇದ್ದು ಈ ರೀತಿ ಮುಸ್ಲಿಂ ಸಮಾಜದ ಬಗ್ಗೆ ಅವಹೇಳನ ಹೇಳಿಕೆ ನೀಡಿರುವ ವಿಚಾರ ಸರಿಯಲ್ಲ ಕೂಡಲೇ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
Kshetra Samachara
30/01/2021 02:06 pm