ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್.ಟಿ ಹೋರಾಟಕ್ಕೆ ಹುಬ್ಬಳ್ಳಿಯಿಂದ 3000 ರೊಟ್ಟಿ: ರೊಟ್ಟಿತಿಂದು ಗಟ್ಟಿ ಧ್ವನಿಯಲ್ಲಿ ಕೂಗಿ ಸರ್ಕಾರಕ್ಕೆ ಮನವಿ

ಹುಬ್ಬಳ್ಳಿ: ಕುರುಬ ಸಮುದಾಯವನ್ನು ಎಸ್.ಟಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಕನಕಗುರು ಪೀಠದ ನಿರಂಜನನಂದಪುರಿ ನೇತೃತ್ವದಲ್ಲಿ ರಾಜ್ಯಾದ್ಯಂತ ಕುರುಬ ಸಮುದಾಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಗೆ ಸಹಾಯಾರ್ಥವಾಗಿ ಹುಬ್ಬಳ್ಳಿಯ ಕುರುಬ ಸಮಾಜದ ವತಿಯಿಂದ ಮೂರುಸಾವಿರ ರೊಟ್ಟಿಯನ್ನು ಬೆಂಗಳೂರಿಗೆ ಕಳಿಸಲಾಯಿತು.

ಹೌದು..ರಾಜ್ಯದ ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಸದುದ್ದೇಶದಿಂದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು,ಫೆಬ್ರವರಿ 07ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎಸ್‌.ಟಿ ಹೋರಾಟದ ಬೃಹತ್ ಸಮಾವೇಶಕ್ಕೆ ಧಾರವಾಡ ಜಿಲ್ಲೆಯಿಂದ ಐವತ್ತು ಸಾವಿರ ರೊಟ್ಟಿಯನ್ನು ನೀಡಲು ನಿರ್ಧರಿಸಿದ ಬೆನ್ನಲ್ಲೇ ಹುಬ್ಬಳ್ಳಿ ಕುರುಬ ಸಮಾಜದ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ನೇತೃತ್ವದಲ್ಲಿ ಮೂರುಸಾವಿರ ರೊಟ್ಟಿಯನ್ನು ಕಳಿಸಿಕೊಡಲಾಯಿತು.

ಸುಮಾರು ಹತ್ತು ದಿನಗಳಲ್ಲಿ ಕುರುಬ ಸಮುದಾಯದ ಮಹಿಳೆಯರು ರೊಟ್ಟಿಯನ್ನು ಸಿದ್ದಪಡಿಸಿ ಬೆಂಗಳೂರಿಗೆ ಕಳಿಸಿಕೊಡುತ್ತಿರುವುದು ವಿಶೇಷವಾಗಿದ್ದು,ಎಸ್.ಟಿ ಹೋರಾಟಕ್ಕೆ ಧಾರವಾಡ ಜಿಲ್ಲೆಯಿಂದ ಕೂಡ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Edited By : Nagesh Gaonkar
Kshetra Samachara

Kshetra Samachara

29/01/2021 05:33 pm

Cinque Terre

49.79 K

Cinque Terre

0

ಸಂಬಂಧಿತ ಸುದ್ದಿ