ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲ ಸಂಗಮ ಜಯಮೃತ್ಯುಂಜಯ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯ ಪಂಚಮಸಾಲಿ ಸಮಾಜದ ನಾಯಕರು ತೆರಳಿದರು.
ಕೂಡಲಸಂಗಮ ದಿಂದ ಬೆಂಗಳೂರು ವಿಧಾನಸೌಧದ ವರೆಗೂ ಐತಿಹಾಸಿಕ ಪಾದಯಾತ್ರೆಯ ಬೆಂಬಲಿಸಿ ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮಾವೃತ್ತದಿಂದ ಗಬ್ಬೂರ ಕ್ರಾಸ್ ವರೆಗೂ ಪಾದಯಾತ್ರೆ ಮಾಡಿ ಅಲ್ಲಿಂದ ಹರಿಹರದಲ್ಲಿ ಬರುವ ಪಂಚಮಸಾಲಿ ಉಭಯ ಶ್ರೀ ಗಳ ಜೊತೆಗೆ ಬೆಂಗಳೂರು ವರೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖoಡರಾದ ನಾಗರಾಜ ಗೌರಿ , ರಾಣಿಚನ್ನಮ್ಮ ಬಳಗದ ಜಿಲ್ಲಾ ಅಧ್ಯಕ್ಷೆ ದೀಪಾ ಗೌರಿ ,ಪಿ ಸಿ ಸಿದ್ದನಗೌಡ್ರ,ಕೊಟ್ರೇಶ್ ಎಸ್ ಕೆ , ರಮೇಶ್ ಅಸುಂಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Kshetra Samachara
28/01/2021 01:42 pm