ಧಾರವಾಡ: ಕೆಬಿಎನ್ ಬಡಾವಣೆ ನಿವೇಶನ ಖರೀದಿ ನೀಡಿ, ಬಡ ಜನರಿಗೆ ಮೋಸ ಮಾಡಿದ ಮಾಲೀಕರು, ಜಿಪಿದಾರರು ಹಾಗೂ ಡೆವಲಪರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಿವೇಶನ ಖರೀದಿ ಮಾಡಿದವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಬಾಬಾಜಾನ್ ಅಬ್ದಲ್ ಖಾದರ್ ಅತ್ತಾರ್ ಎಂಬ ಡವಲಪರ್ ಧಾರವಾಡದ ಮಾಳಾಪೂರ ಸರ್ವೇ ನಂಬರ್ 118ರಲ್ಲಿ ನಿವೇಶನ ನಿರ್ಮಿಸಿದ್ದರು. ಇದರಲ್ಲಿ 150ಕ್ಕೂ ಹೆಚ್ಚು ಜನರು ಪ್ಲಾಟ್ ಖರೀದಿಸಿದ್ದರು. ಇದಕ್ಕೆ ಪ್ರತಿ ತಿಂಗಳ 6 ಸಾವಿರ ರೂಪಾಯಿ ಕಂತು ಹಾಗೂ ರೂ.1 ಲಕ್ಷ ಮುಂಗಡ ಹಣ ಕೂಡ ನೀಡಿದ್ದರು. ಕೆಲವರು ಪೂರ್ತಿ ಹಣ ಸಂದಾಯ ಮಾಡಿದ್ದಾರೆ. ಆದರೆ, ಡೆವಲಪರ್ ಪ್ಲಾಟ್ ನೀಡದೇ, ಹಣವನ್ನೂ ಕೊಡದೇ ಮೋಸ ಮಾಡಿದ್ದಾರೆ. ಸರ್ವೆ ನಂ-118ರ ಆಸ್ತಿ ಬೇರೆಯವರಿಗೆ ಖರೀದಿ ಕೊಡಲು ಡೆವಲಪರ್ ತೀರ್ಮಾನಿಸಿದ್ದಾರೆ. ಹೀಗಿದ್ದರೂ, ಬಡಾವಣೆಯ ಕೆಲ ಜನರಿಗೆ ಅಲ್ಲಿನ ನಿವೇಶನ ಮಾರಾಟ ಮಾಡಿ ವಂಚನೆ ಮಾಡಿದ್ದಾರೆ. ತಕ್ಷಣ ಜಿಲ್ಲಾಧಿಕಾರಿಗಳು, ಕಾನೂನು ಭೂ-ವ್ಯಾಜ್ಯ ಅಡಿಯಲ್ಲಿ ಈ ಆಸ್ತಿ ಬೇರೆಯವರಿಗೆ ಮಾರದಂತೆ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.
Kshetra Samachara
27/01/2021 01:27 pm