ಕುಂದಗೋಳ : ಮಠ ಮಂದಿರಗಳ ಆಸ್ತಿಯನ್ನು ಪರಭಾರೆ ಮಾಡುತ್ತಿದ್ದಾರೆ. ಭಾರತೀಯ ಇತಿಹಾಸದಲ್ಲಿ ಮಠ ಮಂದಿರಗಳಿಂದ ಜ್ಞಾನ ದಾಸೋಹ, ಅನ್ನ ದಾಸೋಹ, ಆಶ್ರಯ ದಾಸೋಹ, ಮೂಲಕ ಭಕ್ತ ಜನತೆಯಲ್ಲಿ ಜಾಗೃತಿ ಮೂಡಿಸಬೇಕಾದ ಮಠಾಧೀಶರಿಂದಲೇ ಮಠದ ಆಸ್ತಿ ಪರಭಾರೆ ಆಗುತ್ತಿರುವುದು ಖಂಡನೀಯ ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ ರಾಜ್ಯದ ಮಠ ಮಂದಿರಗಳ ಆಸ್ತಿಯೂ ಪರಭಾರೆ ಮಾಡಬಾರದೆಂಬ ಉದ್ದೇಶದಿಂದ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಜ.30 ರಂದು ಶನಿವಾರ ಸಂಜೆ 4 ಗಂಟೆಗೆ ಕುಂದಗೋಳ ಪಟ್ಟಣದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಅಭಿನವ ಕಲ್ಯಾಣಪುರ ಬಸವಣ್ಣನವರು ಮಾತನಾಡಿ ದಿಂಗಾಲೇಶ್ವರ ಸ್ವಾಮೀಜಿಯವರು ರಾಜ್ಯದ ಮಠ ಮಂದಿರಗಳ ಆಸ್ತಿಯ ಉಳಿವಿಗಾಗಿ ಈ ಜನ ಜಾಗೃತಿ ನಿರ್ಧಾರ ಕೈಗೊಂಡಿದ್ದು, ನಾವು ಹಾಗೂ ಸಮಸ್ತ ಭಕ್ತ ಸಮೂಹ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಅರವಿಂದಪ್ಪ ಕಟಗಿ, ಕರವೇ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಕಲ್ಲಪ್ಪ ಹರಕುಣಿ, ವಿವಿಧ ಗ್ರಾಮಗಳ ಗುರು ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
27/01/2021 11:48 am