ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಿದ್ರೆ ಮಾಡುವಂತೆ ನಟಿಸುವವರನ್ನು ಎಬ್ಬಿಸಲು ಆಗೋದಿಲ್ಲ

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಯೋಜನೆಗಳನ್ನೇ ಜಾರಿಗೆ ತರುತ್ತಿದ್ದಾರೆ. ಹೀಗಿರುವಾಗ ಟ್ರ್ಯಾಕ್ಟರ್​​​ ರ‍್ಯಾಲಿ ಹಾಗೂ ಇನ್ನಿತರ ಪ್ರತಿಭಟನೆ ನಡೆಸುವುದು ಸಮಂಜಸವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಯಾಣ ಮತ್ತು ಪಂಜಾಬ್ ದಲ್ಲಿ ಮಾಡಿದಂತೆ ನಮ್ಮ ರಾಜ್ಯದಲ್ಲಿಯೂ ಟ್ರ್ಯಾಕ್ಟರ್ ರ‍್ಯಾಲಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಯಾವ ರೈತರು ಸಹ ಈ ಕಾನೂನು ಬೇಡ ಎಂದು ಹೇಳುತ್ತಿಲ್ಲ. ಹಿಂದಿನ ಯಾವ ಸರ್ಕಾರ ‌ಕೊಡದಷ್ಟು ನೆರವು ನಮ್ಮ ಸರ್ಕಾರ ರೈತರಿಗೆ ನೀಡುತ್ತಿದೆ. ರೈತರ ಹಿತಾಸಕ್ತಿಗಾಗಿ ಒಳ್ಳೆಯ ಕೆಲಸ ಮಾಡಲಾಗುತ್ತಿದೆ. ಇಂತಹ ವೇಳೆ ಪ್ರತಿಪಕ್ಷ ನೈತಿಕ ಬೆಂಬಲ‌ ಕೊಡಬೇಕಿತ್ತು, ಆದರೆ, ಬೆಳಿಗ್ಗೆಯಿಂದ ಸಂಜೆಯವರೆಗೂ ಟೀಕೆ ಮಾಡುತ್ತಿದ್ದಾರೆ. ಮೋದಿ ಪಾರದರ್ಶಕ ಆಡಳಿತ ನೋಡಿ, ಸಹಿಸಿಕೊಳ್ಳಲಾರದೇ, ಕಾಂಗ್ರೆಸ್ ಈ ರೀತಿಯಾಗಿ ಹೋರಾಟಕ್ಕೆ ಕುಮ್ಮಕ್ಕು ಕೊಡುತ್ತಿದೆ ಎಂದು ಕಾಂಗ್ರೆಸ್​​ ವಿರುದ್ದ ಕಿಡಿಕಾರಿದರು.

ಯಾವುದೇ ಒಂದು ಕಾಯಿದೆ ಜಾರಿಗೆ ತರುವ ಮೊದಲು ಹಲವಾರು ಬಾರಿ ಅದರ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಯಾವೊಂದು ಕಾಯಿದೆಯನ್ನೂ ಸಹ ಒತ್ತಾಯದಿಂದ ಹೇರಲಾಗುತ್ತಿಲ್ಲ. 20-30 ವರ್ಷಗಳ ಕಾಲ ಆಡಳಿತ ಮಾಡಿದವರು ರೈತರಿಗೆ ಯಾವ ಉಪಕಾರವನ್ನೂ ಸಹ ಮಾಡಿಲ್ಲ ಎಂದು ಕಾಂಗ್ರೆಸ್​​ ವಿರುದ್ಧ ಹರಿಹಾಯ್ದರು.

ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಉಂಟಾದ ರೈತರ ಸಾವಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ, ಅವರೇ ಪ್ರಚೋದನೆ ಕೊಟ್ಟು ಹೋರಾಟಕ್ಕೆ ಕಿಚ್ಚು ಹಚ್ಚಿದ್ದಾರೆ. ನಿಜವಾಗಿ ನಿದ್ದೆ ಮಾಡುವವರನ್ನು ಎಬ್ಬಿಸಬಹುದು ಆದರೆ ನಿದ್ದೆ ಮಾಡುವಂತೆ ನಾಟಕ ಮಾಡುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಕಾಯಿದೆ ಬಗ್ಗೆ ತಿಳವಳಿಕೆ ಮೂಡಿಸುವ ಎಲ್ಲಾ ಕೆಲಸ ನಾವು ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

26/01/2021 05:00 pm

Cinque Terre

53.29 K

Cinque Terre

6

ಸಂಬಂಧಿತ ಸುದ್ದಿ