ನವಲಗುಂದ : ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನವಲಗುಂದದ ಕಳಸಾಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಪತ್ರ ನೀಡಲಾಯಿತು.
ಮಲ್ಲಪ್ರಭಾ ಮಹದಾಯಿ ಕಳಸಾ ಬಂಡೂರಿ ಕೆಲಸ ಕಾಮಗಾರಿ ಆರಂಭವಾಗಿಲ್ಲಾ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭ ಮಾಡವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕಳಸಾಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಇನ್ನು ಈ ವೇಳೆ ಸುಭಾಸ್ ಚಂದ್ರಗೌಡ ಪಾಟೀಲ್, ಮಲ್ಲೇಶ್ ಉಪ್ಪಾರ್, ಸಿದ್ದಪ್ಪ ಮುಫೈನವರ, ಸಿದ್ದಲಿಂಗಪ್ಪ ಹಳ್ಳದ, ಮಲ್ಲಿಕಾರ್ಜಿಗೌಡ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
Kshetra Samachara
24/01/2021 07:39 pm