ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವ ಗಂಗಣ್ಣ ಶಿಂತ್ರಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗಂಗಣ್ಣ ಶಿಂತ್ರಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಅವರ ತಂದೆಯಾಗಿದ್ದಾರೆ. ವಿನಯ್ ಕುಲಕರ್ಣಿ ಅವರು ಗಂಗಣ್ಣ ಅವರಿಗೆ ಹಿರಿಯ ಅಳಿಯ.
ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ವಿನಯ್ ಅವರ ಜಾಮೀನು ಅರ್ಜಿ ಮೊನ್ನೆಯಷ್ಟೇ ಹೈಕೋರ್ಟ್ ನಲ್ಲಿ ವಜಾಗೊಂಡಿದೆ. ಇದರಿಂದ ಗಂಗಣ್ಣ ಅವರು ತೀವ್ರ ನೊಂದುಕೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗಂಗಣ್ಣ ಶಿಂತ್ರಿ ಅವರು ಸವದತ್ತಿಯಲ್ಲಿ ವಾಸವಿರುತ್ತಿದ್ದರು. ಸಂಜೆ ಸವದತ್ತಿಯಲ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದೆ.
Kshetra Samachara
24/01/2021 11:53 am