ಅಣ್ಣಿಗೇರಿ : ನೂತನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಮಲ್ಲರಡ್ಡಿ ಕುರಹಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಚುನಾವಣೆ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕಾಗಿ ಜೆಡಿಎಸ್ ನ ದೇವೆಂದ್ರಪ್ಪ ರೋಣದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ ಘೋಷಣೆ ಮಾಡಿದರು. ಅಣ್ಣಿಗೇರಿ ತಾ.ಪಂ ಒಟ್ಟು 5 ಸದಸ್ಯರನ್ನೊಳಗೊಂಡಿದೆ. ಜೆಡಿಎಸ್ 3. ಕಾಂಗ್ರೆಸ್ 1 ಹಾಗೂ ಬಿಜೆಪಿ 1 ಸ್ಥಾನವನ್ನು ಪಡೆದುಕೊಂಡಿದೆ. ನೂತನವಾಗಿ ಆಯ್ಕೆಯಾದ ತಾ.ಪಂ ಅಧ್ಯಕ್ಷ ದೇವೆಂದ್ರಪ್ಪ ರೋಣದ ಅವರನ್ನು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎನ್.ಎಚ್.ಕೋನರಡ್ಡಿ ನೇತೃತ್ವದಲ್ಲಿ ಹೂ ಮಾಲೆ ಹಾಕಿ ಅಭಿನಂದಿಸಿದರು.
Kshetra Samachara
23/01/2021 10:23 am