ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಪಿಡಿಓಗಳ ಕೊರಳಪಟ್ಟಿ ಹಿಡಿಯಿರಿ ಎಂದಿದ್ದಕ್ಕೆ ಪಿಡಿಓಗಳ ರಾಜ್ಯ ಮಟ್ಟದ ಸಮಾವೇಶ

ಹುಬ್ಬಳ್ಳಿ- ಸಚಿವ ವಿ.ಸೋಮಣ್ಣ ಪಂಚಾಯತಿ ಪಿಡಿಓಗಳ ಕೊರಳಪಟ್ಟಿ ಹಿಡಿದು ಕೆಲಸವನ್ನ ತೆಗೆದುಕೊಳ್ಳಬೇಕೆಂದು ಹೇಳಿದ್ದ ಸ್ಥಳದಲ್ಲೇ ಪಿಡಿಓಗಳ ರಾಜ್ಯ ಮಟ್ಟದ ಸಮಾವೇಶವನ್ನ ಜನವೇರಿ 23ರಂದು ಹಮ್ಮಿಕೊಳ್ಳಲಾಗಿದೆ.

ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ, ಸತ್ಕಾರ ಮಾಡುವ ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ, ಗ್ರಾಮಗಳಲ್ಲಿ ಕೆಲಸವಾಗಬೇಕು ಎಂದರೆ, ಪಿಡಿಓಗಳ ಕೊರಳಪಟ್ಟಿ ಹಿಡಿಯಿರಿ ಎಂದು ಕರೆ ನೀಡಿದ್ದ ಜಾಗದಲ್ಲಿಯೇ, ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದಿಂದ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ರಾಜ್ಯಾಧ್ಯಕ್ಷ ಬೋರಯ್ಯ ಎಚ್, ಹಲವು ಬೇಡಿಕೆಗಳನ್ನಿಟ್ಟುಕೊಂಡು ಸಮಾವೇಶ ನಡೆಸುತ್ತಿದೆ. ಸಿಬ್ಬಂದಿಗಳ ವೇತನವೂ ಸೇರಿದಂತೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಸಮಾವೇಶದಲ್ಲಿ ಸಚಿವರನ್ನ ಕೇಳಿಕೊಳ್ಳಲಾಗುವುದೆಂದರು. ಜನೆವರಿ 23ರಂದು ಹುಬ್ಬಳ್ಳಿಯ ಗೋಕುಲ ಗಾರ್ಡನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆಂದು ವಿವರಿಸಿದರು.

Edited By : Manjunath H D
Kshetra Samachara

Kshetra Samachara

22/01/2021 03:31 pm

Cinque Terre

17.79 K

Cinque Terre

1

ಸಂಬಂಧಿತ ಸುದ್ದಿ