ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೈಲಂಟ್ ಆದ ಸಚಿವಾಕಾಂಕ್ಷಿ ಶಾಸಕ ಅರವಿಂದ ಬೆಲ್ಲದ

ಹುಬ್ಬಳ್ಳಿ; ನಾನು ರಾಜಕೀಯವಾಗಿ ಏನನ್ನು ಮಾತನಾಡುವುದಿಲ್ಲ.ಅಲ್ಲದೆ ನಾನು ದೆಹಲಿಗೆ ಹೋಗಿನೂ ಇಲ್ಲ ನಾನು ಏನನ್ನು ಮಾತನಾಡುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವ ಕುರಿತು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಈ ಕುರಿತು ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕುರಿತು ಸಿಎಂ ಅವರಿಗೆ ಗೊತ್ತಿದೆ‌‌.ಇದರ ಬಗ್ಗೆ ನನಗೆ ಗೊತ್ತಿಲ್ಲ.ನಾನು ಇದರ ಬಗ್ಗೆ ಏನನ್ನು ಮಾತನಾಡುವುದಿಲ್ಲ ಎಂದು ಪುನರ್ ಉಚ್ಚರಿಸಿದರು.

ಇನ್ನೂ ಬೆಲ್ಲದ ಅವರ ತಂದೆ ಕೂಡ ಸಚಿವ ಸ್ಥಾನದಿಂದ ವಂಚಿತರಾಗಿರುವ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,ಈಗ ನಾನು ಯಾವುದೇ ರಾಜಕೀಯ ವಿಷಯಗಳ ಕುರಿತು ಮಾತನಾಡುವುದಿಲ್ಲ.ನೋ ಪೊಲಿಟಿಕ್ಸ್,ನೋ ಪೊಲಿಟಿಕ್ಸ್ ಎಂದು ಮಾಧ್ಯಮದ ಪ್ರಶ್ನೆಯನ್ನು ತಳ್ಳಿ ಹಾಕಿದರು.

ಈಗ ನಾನು ಬಿ.ಆರ್.ಟಿ.ಎಸ್ ಹಾಗೂ ಹು-ಧಾ ಬೈಪಾಸ್ ಬಗ್ಗೆ ಮೀಟಿಂಗ್ ಮಾಡುತ್ತಿದ್ದೇನೆ. ನಾನು ಯಾವುದೇ ರಾಜಕೀಯ ವಿಷಯಗಳ ಕುರಿತು ಚರ್ಚೆ ಮಾಡುವುದಿಲ್ಲ ಎಂದು ತಮ್ಮಲ್ಲಿರುವ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದರು.

Edited By : Nirmala Aralikatti
Kshetra Samachara

Kshetra Samachara

21/01/2021 03:46 pm

Cinque Terre

12.02 K

Cinque Terre

1

ಸಂಬಂಧಿತ ಸುದ್ದಿ