ಕಲಘಟಗಿ: ಸಮಾಜ ಕಲ್ಯಾಣ ಇಲಾಖೆಯ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸಕರನ್ನು ವೇದಿಕೆಗೆ ಕರೆಯದ ಕಾರಣ ದಲಿತ ಮುಖಂಡರು, ಕಾರ್ಯಕರ್ತರು ಸಭೆಯಿಂದ ಹೊರನಡೆದಿದ್ದರಿಂದ ಗೊಂದಲ ಉಂಟಾದ ಘಟನೆ ಜರುಗಿತು.
ಮಿಶ್ರಿಕೋಟಿ ಗ್ರಾಮದಲ್ಲಿ ಜರುಗಿದ ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ನಿಯಮಗಳ 1977 ಕರ್ನಾಟಕ ಅನುಸೂಚಿತ ಜಾತಿಗಳ ಪಂಗಡಗಳ ತಿದ್ದುಪಡಿ ಅಧಿನಿಯಮ 2015 ಮತ್ತು ತಿದ್ದುಪಡಿ ನಿಯಮಗಳ 2016 ಅನುಷ್ಠಾನ ಕುರಿತ ಕಾರ್ಯಗಾರದಲ್ಲಿ ವಿಶೇಷ
ಉಪನ್ಯಾಸಕರಾದ ಡಾ. ಲಕ್ಷ್ಮಣ ಬಕ್ಕಾಯಿ ಅವರನ್ನು ವೇದಿಕೆಗೆ ಅಹ್ವಾನಿಸದ ಕಾರಣ, ಸಭೆಯಲ್ಲಿ ಗೊಂದಲಕ್ಕೆ ಕಾರಣವಾಯಿತು.
ತಹಸೀಲ್ದಾರ ಅಶೋಕ ಶಿಗ್ಗಾವಿ ಅವರು ಗದ್ದಲ ತಿಳಿಗೊಳ್ಳಿಸಿ ಕಾರ್ಯಕ್ರಮ ಆರಂಭಗೊಳಿಸಿದರು.
Kshetra Samachara
20/01/2021 07:44 pm