ಧಾರವಾಡ: ಕರ್ನಾಟಕದಲ್ಲಿ ಮರಾಠಿ ಭಾಷೆ ಚಾಲ್ತಿಯಲ್ಲಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿರುವ ಹೇಳಿಕೆಯನ್ನು ಧಾರವಾಡದ ಮರಾಠಿಗರು ವಿರೋಧಿಸಿದ್ದಾರೆ.
ಉದ್ಧವ ಠಾಕ್ರೆ ವಿರುದ್ಧ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮರಾಠಾ ಕ್ರಾಂತಿ (ಮೌನ) ಮೋರ್ಚಾ ಸದಸ್ಯರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬೆಳಗಾವಿ, ಕಾರವಾರ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿನ ಒಂದಿಚೂ ಜಾಗವನ್ನು ನಾವು ಬಿಟ್ಟುಕೊಡುವುದಿಲ್ಲ. ಶತ ಶತಮಾನಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಮರಾಠಿಗರು ಅಪ್ಪಟ ಕನ್ನಡಿಗರು. ಕರ್ನಾಟಕದ ನೆಲ-ಜಲ ಭಾಷೆಯ ಉಳಿವಿಗಾಗಿ ಪ್ರಾಣ ಕೊಡಲು ಕೂಡ ಸಿದ್ಧರಿದ್ದೇವೆ. ಠಾಕ್ರೆ ಅವರ ಹೇಳಿಕೆ ನಮಗೆ ನೋವುಂಟು ಮಾಡಿದೆ. ಯಾವುದೋ ಭ್ರಮೆಯಲ್ಲಿ ಮರಾಠಿ ಭಾಷೆ ಮಾತನಾಡುವ ಪ್ರದೇಶವೆಲ್ಲ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೇಳಿಕೆ ಠಾಕ್ರೆ ಹೇಳಿಕೆಗೆ ಶೋಭೆ ತರವಂತದ್ದಲ್ಲ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಠಾಕ್ರೆ ಅವರು ಈ ರೀತಿಯ ಹೇಳಿಕೆಯನ್ನು ನೀಡಬಾರದು ಎಂದು ಮರಾಠಾ ಮುಖಂಡರು ಒತ್ತಾಯಿಸಿದರು.
Kshetra Samachara
20/01/2021 03:36 pm