ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಜ.20ಕ್ಕೆ ಕಿಸಾನ್ ಕಾಂಗ್ರೆಸ್ ರಾಜಭವನ ಚಲೋ ಕಾರ್ಯಕ್ರಮ

ಕುಂದಗೋಳ : ಕೇಂದ್ರ ಸರ್ಕಾರ ಹಲವು ವಿರೋಧಗಳ ನಡುವೆಯೂ ಜಾರಿಗೆ ತಂದಿರುವ ಭೂ ಸುಧಾರಣಾ, ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಧಾರವಾಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷನಾಗಿ ಇದೇ ಜ.20 ಬೆಂಗಳೂರಿನ ರಾಜಭವನಕ್ಕೆ ಧಾರಾವಾಡ ಜಿಲ್ಲೆಯಿಂದ ಐದು ಸಾವಿರ ರೈತರ ಸಮ್ಮುಖದಲ್ಲಿ ತೆರಳಲಿದ್ದೇವೆ ಎಂದು ಕಿಸಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಆಡಳಿತಾರೂಢ ಸರ್ಕಾರ ಪ್ರಜೆಗಳಿಗೆ ಅನ್ಯಾಯ ಎಸಗಿದೆ, ಭೂ ಸುಧಾರಣಾ ಎಪಿಎಂಸಿ ಕಾಯ್ದೆ ವಿರೋಧಿಸಿ ನಮ್ಮ ಹೋರಾಟ ನಡೆಯುತ್ತದೆ ಎಂದರು.

ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಗಂಗಾಧರ ಪಾಣಿಗಟ್ಟಿ ಮಾತನಾಡಿ ರೈತರ ಹೋರಾಟಕ್ಕೆ ಜಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಿಸಾನ್ ಕಾಂಗ್ರೆಸ್ ಸಹ ಈ ಹೋರಾಟದಲ್ಲಿ ಪಾಲ್ಗೊಂಡು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಾಥ್ ನೀಡಲಿದ್ದೇವೆ ಎಂದರು. ಕಾಂಗ್ರೆಸ್ ಧುರೀಣ ಜಿ.ಡಿ.ಘೋರ್ಪಡೆ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಕಿಸಾನ್ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೆಂಬಲಿಗರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

18/01/2021 05:26 pm

Cinque Terre

22.86 K

Cinque Terre

0

ಸಂಬಂಧಿತ ಸುದ್ದಿ