ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಆತ್ಮಹತ್ಯಾ ತಿಳುವಳಿಕೆ ಪತ್ರ ವಿತರಿಸಿ ಕಂಬನಿ ಮಿಡಿದ ಶಾಸಕಿ ಕುಸುಮಾ

ಕುಂದಗೋಳ : ನಿಮ್ಮ ಕುಟುಂಬದವರೂ ಸಾಲದ ಭಾದೆಗೆ ಬಳಲಿ ಅಕಾಲಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರು ದೃತಿಗೆಡಬೇಡಿ ಸರ್ಕಾರ ನಿಮ್ಮನ್ನು ಸಾಲದ ಸುಳಿಯಿಂದ ಪಾರು ಮಾಡಲು ನಿಮ್ಮ ಖಾತೆಗೆ ಪರಿಹಾರ ಹಾಕಿದೆ ನೀವೆ ನೇರವಾಗಿ ಪಡೆದುಕೊಳ್ಳಿ ಎಂದರು.

ಅವರು ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಜರುಗಿದ ಅತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಿಳುವಳಿಕೆ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ 'ತಾಲೂಕಿನಲ್ಲಿ ಇನ್ಮುಂದೆ ಯಾವುದೇ ರೈತರು ಆತ್ಮಹತ್ಯೆಗೆ ಒಳಗಾಗಬೇಡಿ ಸಾಲ ನಷ್ಟ ಅತಿವೃಷ್ಟಿ ಇತರೆ ಸಮಸ್ಯೆಗೆ ನಮ್ಮನ್ನ ಭೇಟಿ ಮಾಡಿ ಕೈಲಾದ ಸಹಾಯ ಮಾಡುತ್ತೇವೆ ದುಡುಕಬೇಡಿ ಎಂದರು.

ಪಿಎಲ್'ಡಿ ಬ್ಯಾಂಕ್ ಅಧ್ಯಕ್ಷ ಅರವಿಂದಪ್ಪ ಕಟಗಿ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರ ಖಾತೆಗೆ ನೇರ ಹಣ ಜಮಾ ಮಾಡಿ ಇತರರ ಹಸ್ತಕ್ಷೇಪ ತಪ್ಪಿಸಿದೆ‌ ಹಣ ಬಳಸಿ ಸಾಲ ಪರಿಹಾರ ಮಾಡಿಕೊಳ್ಳಿ ಎಂದರು.

ಶಾಸಕಿ ಕುಸುಮಾವತಿ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಹಾಗೂ ಕುಟುಂಬದವರಿಗೆ ತಿಳುವಳಿಕೆ ಪತ್ರ ವಿತರಿಸಿ ಕಂಬನಿ ಮಿಡಿದರು. ಈ ವೇಳೆ ಕಾಂಗ್ರೆಸ್ ಎಸ್.ಸಿ ಘಟಕದ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ದೊಡ್ಡಮನಿ ಶಾಸಕರಿಗೆ ಹಾಗೂ ಅರವಿಂದಪ್ಪ ಕಟಗಿಯವರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಕಾಂಗ್ರೆಸ್ ಧುರೀಣರು, ಪಕ್ಷದ ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

18/01/2021 05:20 pm

Cinque Terre

21.38 K

Cinque Terre

0

ಸಂಬಂಧಿತ ಸುದ್ದಿ