ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಕಂದಾಯ ಇಲಾಖೆ ನೌಕರರಿಗೆ ಕ್ಲಾಸ್ ತೆಗೆದುಕೊಂಡು ಶಾಸಕ‌ಸಿ ಎಂ ನಿಂಬಣ್ಣವರ

ಕಲಘಟಗಿ:ಪಟ್ಟಣದಲ್ಲಿರುವ ಕಂದಾಯ ಇಲಾಖೆ ನೌಕರರಿಗೆ ಶಾಸಕ ಸಿ ಎಂ ನಿಂಬಣ್ಣವರ ಬೆಳಿಗ್ಗೆ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಕ್ಲಾಸ್ ತೆಗೆದುಕೊಂಡರು.

ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಕಂದಾಯ ಇಲಾಖೆಗೆ ಭೇಟಿ ನೀಡಿ, ಸಿಬ್ಬಂದಿಯ ಹಾಜರಾತಿ ಪುಸ್ತಕ ಪಡೆದು ಹಾಜರಿ ಪರಿಶೀಲನೆ ಮಾಡಿ ಎಚ್ಚರಿಕೆ ನೀಡಿದರು.

ಕಛೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ‌ ನೌಕರರಿಗೆ ತಿಳಿಸಿದರು.ಜನರ ಅವಶ್ಯಕ ಕೆಲಸ ಮಾಡುವಲ್ಲಿ ವಿಳಂಬ ಮಾಡದೇ,ನೌಕರರು ಪ್ರಾಮಾಣಿಕವಾಗಿ ಸೇವೆ ಮಾಡುವಂತೆ ತಿಳಿಸಿದರು‌.ಮತ್ತೆ ಜನರಿಂದ ದೂರಗಳು ಕೇಳಿ ಬಂದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ತಹಶೀಲ್ದಾರ ಅಶೋಕ ಶಿಗ್ಗಾವಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

18/01/2021 12:31 pm

Cinque Terre

28.44 K

Cinque Terre

1

ಸಂಬಂಧಿತ ಸುದ್ದಿ