ನವಲಗುಂದ : ನವಲಗುಂದ ಪಿಎಸ್‌ಐ ಜಯಪಾಲ್ ಪಾಟೀಲ ಅತ್ಯಂತ ಭ್ರಷ್ಟ ಅಧಿಕಾರಿಯಾಗಿದ್ದು , ಈ ಅಧಿಕಾರಿಯನ್ನು ಅಮಾನತ್ತು ಮಾಡದೇ ಹೋದಲ್ಲಿ ಪೊಲೀಸ್ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಕರ್ನಾಟಕ ರೈತ ಸೇನಾಧ್ಯಕ್ಷ ವಿರೇಶ್ ಸೊಬರದಮಠ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಪಿಎಸ್‌ಐ ಜಯಪಾಲ್ ಪಾಟೀಲ ಅವರ ವಿರುದ್ಧ ಸಾಕಷ್ಟು ಪ್ರಕರಣಗಳಿವೆ . ಹಿಂದೆ ಕೊಲೆ ಪ್ರಕರಣದಲ್ಲಿ ಅಮಾನತುಗೊಂಡು ಪುನಃ ನವಲಗುಂದದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2- 3 ವರ್ಷಗಳಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡದೆ ಇಲ್ಲೇ ಉಳಿಸಿಕೊಳ್ಳಲಾಗಿದೆ . ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದರು . ಭ್ರಷ್ಟ ಅಧಿಕಾರಿ ಪಿಎಸ್‌ಐ ಜಯಪಾಟೀಲ ಮೇಲೆ ಮೇಲಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು .
ಇಲ್ಲದಿದ್ದರೆ ನವಲಗುಂದ ಜನಸ್ನೇಹಿ ಪೊಲೀಸ್ ಠಾಣೆ ಎದುರು ಅಮಾನತ್ತಿಗಾಗಿ ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದು ಈ ವೇಳೆ ಒತ್ತಾಯಿಸಿದರು . ಇನ್ನು ಸುದ್ದಿಘೋಷ್ಠಿಯಲ್ಲಿ ಬಸವರಡ್ಡಿ ನಾವಳ್ಳಿ, ಬಸವರಾಜ ಕಂಬಳಿ, ವೆಂಕಟೇಶ ಗೋಕುಲ ಇದ್ದರು .
Kshetra Samachara
18/01/2021 11:08 am