ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬ್ಯಾಂಕ್ ಗಳ ಕಿರುಕುಳ ತಪ್ಪಿಸಿ

ಧಾರವಾಡ: ರೈತರಿಗೆ ಬ್ಯಾಂಕ್​ಗಳು ನೀಡುತ್ತಿರು ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಧಾರವಾಡ ತಾಲೂಕಿನ ತೇಗೂರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಆರ್ ಕೆಎಸ್ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕಳೆದ ಆರು ತಿಂಗಳಿನಿಂದ ಲಾಕ್​ಡೌನ್ ಆಗಿ​ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ರೈತ ಸಮುದಾಯ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಬ್ಯಾಂಕ್​ಗಳು ರೈತರಿಗೆ ಬೆಳೆ ಸಾಲ ತೀರಿಸುವಂತೆ ಒತ್ತಾಯಿಸುತ್ತಿರುವುದು ಅತ್ಯಂತ ಖಂಡನೀಯ.

ಗಂಡನ ಹೆಸರಿನಲ್ಲಿ ಬೆಳೆ ಸಾಲ ಮಾಡಲಾಗಿದ್ದು, ಹೆಂಡತಿಯ ಖಾತೆಗೆ ಜಮೆ ಆಗಿರುವ ಗುಂಪು ಹಣವನ್ನು ಬೆಳೆ ಸಾಲಕ್ಕೆ ತುಂಬಿಸಿಕೊಳ್ಳುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಅಪ್ಪನ ಹೆಸರಿನಲ್ಲಿ ಬೆಳೆಸಾಲ ಮಾಡಲಾಗಿದ್ದು, ಮಗನ ಖಾತೆಗೆ ಜಮೆ ಆಗಿರುವ ಕಬ್ಬಿನ ಬಿಲ್​ ಹಣವನ್ನು ಬೆಳೆ ಸಾಲಕ್ಕೆ ವಜಾ ಮಾಡಲಾಗಿದೆ. ಈ ರೀತಿಯಾಗಿ ಬ್ಯಾಂಕ್​ನಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಪರಿಹರಿಸಬೇಕು ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಆಗ್ರಹಿಸಿದೆ.

Edited By : Nagesh Gaonkar
Kshetra Samachara

Kshetra Samachara

16/01/2021 10:19 pm

Cinque Terre

23.47 K

Cinque Terre

0

ಸಂಬಂಧಿತ ಸುದ್ದಿ