ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ವೇಳೆ ಅಸಮಾಧಾನಗಳು ಸಹಜ. ನಮ್ಮಪಕ್ಷದ ವರಿಷ್ಟರು ಎಲ್ಲರನ್ನೂ ಸಮಾಧಾನಪಡಿಸುವ ಕೆಲಸ ಮಾಡಲಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಚಿವ ಸಂಪುಟ ವಿಸ್ತರಣೆ ಮಾಡೋದು ಸಿಎಂ ಪರಮಾಧಿಕಾರ. ಸಂಪುಟ ವಿಸ್ತರಣೆ ಸಂದರ್ಭ ಅಸಮಾಧಾನಗಳು ಭುಗಿಲೇಳುವುದು ಸಹಜ. ಎಲ್ಲರನ್ನ ಸಮಾಧಾನಪಡಿಸುವ ಕೆಲಸವನ್ನ ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದರು.
ಎಚ್.ವಿಶ್ವನಾಥ ಸಿ.ಡಿ ಬಹಿರಂಗಪಡಿಸುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಆಂತರಿಕ ವಿಚಾರಗಳು ಏನೇ ಇದ್ದರೂ, ಅದನ್ನು ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡಬೇಕು.ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು. ಅಸಮಾಧಾನಗೊಂಡವರಿಗೆ ಪಕ್ಷದ ವರಿಷ್ಠರು ಸೂಕ್ತ ಸ್ಥಾನಮಾನ ನೀಡಲಿದ್ದಾರೆಂಬ ಭರವಸೆ ಇದೆ ಎಂದರು.
Kshetra Samachara
14/01/2021 11:41 am