ಕಲಘಟಗಿ:ದೇಶದಲ್ಲಿ ನರೇಗಾ ಯೋಜನೆಯನ್ನಿ ಜಾರಿಗೆ ತರುವ ಮೂಲಕ ಕನಿಷ್ಠ ಕೂಲಿ ಸಿಗುವಂತೆ ಮಾಡಿರುವುದ ಕಾಂಗ್ರೆಸ್ ಪಕ್ಷದ ಹೆಗ್ಗಳಿಕೆ ಎಂದು ಮಾಜಿ ಸಚಿವ ಸಂತೋಷ ಲಾಡ್ ತಿಳಿಸಿದರು.
ಅವರು ಮಡ್ಕಿಹೊನ್ನಳ್ಳಿಯಲ್ಲಿ ನೂತನ ಗ್ರಾ ಪಂ ಸದಸ್ಯರನ್ನು ಸನ್ಮಾನಿಸಿ ಸಮಾರಂಭ ಉದ್ದೇಶಿಸಿ ಮಾತನಾಡಿ,ಉದ್ಯೋಗ ಖಾತ್ರಿಯಲ್ಲಿ ಗ್ರಾಮೀಣ ಭಾಗದ ಜನರು ಜಾಬ್ ಕಾರ್ಡ್ ಪಡೆದು ಹೆಣ್ಣು ಗಂಡು ಎಂಬ ಭೇದ ಭಾವ ಇಲ್ಲದೇ ಕೂಲಿ ಪಡೆಯುವಂತೆ ಮಾಡಿರುವುದು ಕಾಂಗ್ರೆಸ್ ಪಕ್ಷದ ಕೊಡುಗೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತರು ಗ್ರಾ ಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸಿದ್ದಾರೆ ಎಂದರು.
ಮಾಜಿ ಸಚಿವ ಕೆ ಎಚ್ ಮುನಿಯಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
Kshetra Samachara
11/01/2021 10:33 pm