ಹುಬ್ಬಳ್ಳಿ: ಈಗಾಗಲೇ ಬೆಂಗಳೂರು, ಮೈಸೂರು ವಿಭಾಗದ ಸಮಾವೇಶ ಯಶಸ್ವಿಯಾಗಿ ನಡೆದಿದೆ.ಬೆಳಗಾವಿ ವಿಭಾಗದ ಸಮಾವೇಶ ಹುಬ್ಬಳ್ಳಿಯ ನಡೆಯುತ್ತಿದೆ. ನಾವು ಸಂಕಲ್ಪ ಮಾಡಲು ಇಲ್ಲಿಸೇರಿದ್ದೇವೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ ಹೇಳಿದರು.
ನಗರದಲ್ಲಿಂದು ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 2021 ಹೋರಾಟದ ವರ್ಷ. ಸಂಘರ್ಷದ ವರ್ಷ ಎಂದು ಘೋಷಣೆ ಮಾಡಿದ್ದೇವೆ.
ರಾಷ್ಟ್ರ, ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನೋದು ನಿಮಗೆಲ್ಲ ಗೊತ್ತಿದೆ. ಕಾಂಗ್ರೆಸ್ ಮಾಸ್ ಗ್ರೇಡ್ ಪಕ್ಷವಾಗಿದೆ. ಇದೀಗ ಕೆಡರ್ ಗ್ರೇಡ್ ಪಕ್ಷ ಮಾಡಬೇಕಾಗಿದೆ.ಕಾರ್ಯಕರ್ತರು ಜವಾಬ್ದಾರಿಗಳನ್ನು ಹೇಗೆ ನೀಡಬೇಕು, ಅವರು ಹೇಗೆ ಕೆಲಸ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ.
ಕಾಂಗ್ರೆಸ್ ಪಕ್ಷ ಹೋರಾಟ ಮಾಡಿಕೊಂಡು ಬಂದಿರುವ ಪಕ್ಷ. ಪಕ್ಷದ ಇತಿಹಾಸವನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಗುರಿಯನ್ನು ಮರೆತರೆ ಸೋಲು ಕಟ್ಟಿಟ್ಟ ಬುತ್ತಿ ಅಂತಾ ನೆಹರು ಅವರು ಹೇಳಿದ್ದರು. ನಾಯಕರು ತಯಾರಿ ಆಗಬೇಕಿದೆ. ಅದನ್ನು ನಾವು ಮಾಡುತ್ತಿದ್ದೇವೆ.
ಇಲ್ಲಿ ಬಂದಿರುವ ನೀವೆಲ್ಲ ಕಾರ್ಯಕರ್ತರಲ್ಲ, ಎಲ್ಲರೂ ನಾಯಕರೇ.ಅವಕಾಶಗಳನ್ನು ಸೃಷ್ಟಿಸಿಕೊಂಡರೆ ಮಾತ್ರ ನೀವು ನಾಯಕರು ಆಗಲು ಸಾಧ್ಯ.
ನಿಮ್ಮ ಸಮಸ್ಯೆಗಳ ಹೇಳಿಕೊಳ್ಳಲು ಇಲ್ಲಿ ವೇದಿಕೆ ಕೊಡುತ್ತೇವೆ. ನಿಮ್ಮ ಕೆಲಸಗಳ ಬಗ್ಗೆ ನಾವು ಈಗಾಗಲೇ ವರದಿ ಮಾಡಿದ್ದೇವೆ ಎಂದರು.
ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಮಾಜಿ ಸಚಿವ ಎಂ.ಬಿ ಪಾಟೀಲ್, ಆರ್.ವಿ ದೇಶಪಾಂಡೆ, ರಾಮಲಿಂಗಪ್ಪ ರೆಡ್ಡಿ, ಕೆ.ಬಿ ಕೋಳಿವಾಡ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಕುಸುಮಾ ಶಿವಳ್ಳಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.
ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಸಮಾವೇಶ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ನಾಯಕರು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
Kshetra Samachara
11/01/2021 01:27 pm