ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಡಬ್ಲುಡಿಯಿಂದ ಧಾರವಾಡದಲ್ಲಿ ವಿವಿಧ ಕಾಮಗಾರಿಗೆ ಚಾಲನೆ

ಧಾರವಾಡ: ಡಾ.ಬಿ.ಆರ್. ಅಂಬೇಡ್ಕರ್ ಅವರು 1923 ರಲ್ಲಿ ಧಾರವಾಡಕ್ಕೆ ಬಂದು ಶಾಲೆ ಆರಂಭಿಸಿದ ಸ್ಥಳವನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. 3ನೇ ಹಂತದ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, 32 ಕೋಟಿ ವೆಚ್ಚದಲ್ಲಿ ಈ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವಿಎಂ ಮಷಿನ್ ಗಳ ಸ್ಟೋರೇಜ್ ಗೆ ಕಟ್ಟಡ ಕಟ್ಟುತ್ತಿದ್ದೇವೆ ಧಾರವಾಡದಲ್ಲಿ 4 ಕೋಟಿ ವೆಚ್ಚದಲ್ಲಿ ಕಟ್ಟಡ ಸಿದ್ಧವಾಗುತ್ತಿದೆ. ಅಲ್ಲದೇ ಏಷ್ಯಾದಲ್ಲಿ ಪ್ರಥಮವಾಗಿ ಹುಬ್ಬಳ್ಳಿಯಲ್ಲಿ ಬಾರ್ ಅಸೋಸಿಯೇಷನ್ ಕಟ್ಟಡ ಕಟ್ಟುತ್ತಿದ್ದೇವೆ. 9 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ನುಗ್ಗಿಕೇರಿ ಹನುಮಂತ ದೇವಸ್ಥಾನದ ಅಭಿವದ್ಧಿಗೆ 2 ಕೋಟಿಯ ಟೆಂಡರ್ ಕರೆಯಲಾಗಿದೆ. ಧಾರವಾಡದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Edited By : Nagesh Gaonkar
Kshetra Samachara

Kshetra Samachara

10/01/2021 07:02 pm

Cinque Terre

93.69 K

Cinque Terre

9

ಸಂಬಂಧಿತ ಸುದ್ದಿ