ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಗೆ ಎಂಎಲ್‌ಸಿ ಎಸ್.ವಿ. ಸಂಕನೂರ ಆಗಮಿಸಿದ ವೇಳೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಈಶ್ವರಪ್ಪ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. "ವಿಧಾನ ಪರಿಷತ್‌ನವರು ಬಂದ್ರೆ ನಮಗೆ ಭಯ ಆಗುತ್ತಪ್ಪ" ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮೊನ್ನೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಈಶ್ವರಪ್ಪ ಈ ಮಾತು ಹೇಳಿದ್ದಾರೆ. ಸಂಕನೂರ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸುತ್ತಿದ್ದಂತೆ ಪರಿಷತ್‌ನವರನ್ನು ಕಂಡರೆ ಭಯ ಎಂದು ಪಕ್ಕದಲ್ಲಿದ್ದ ಶಾಸಕ ಅಮೃತ ದೇಸಾಯಿಗೆ ಈಶ್ವರಪ್ಪ ಹೇಳಿದರು.
ಶಾಲೆ ದತ್ತು ಯೋಜನೆ ಬಳಸಿಕೊಳ್ಳಿ: ಶಾಸಕರು ಶಾಲೆ ದತ್ತು ಪಡೆದುಕೊಂಡ ವಿಚಾರವಾಗಿ ಮಾತನಾಡಿದ ಅವರು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ. ಶಾಲೆಯ ಅಭಿವೃದ್ಧಿಗೆ ಇರುವ ಹಣವನ್ನು ಬೇಗ ಬಳಸಿಕೊಳ್ಳಿ ಎಂದು ಡಿಡಿಪಿಐಗೆ ತಿಳಿಸಿದರು.
Kshetra Samachara
10/01/2021 06:55 pm