ಹುಬ್ಬಳ್ಳಿ- ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗತ್ತಾರೆ. ಆದರೆ ಅದೇ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಸೇರಿ ರೂಮಿನಲ್ಲಿ ಒಳಗಡೆ ಹೋದರೆ ಒಬ್ಬ ಲೀಡರ್ ಹುಟ್ಟುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಗೋಕುಲ ಗಾರ್ಡನ್ ನಲ್ಲಿ ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಜನಸೇವಕ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಗಾಂಧಿ ಕುಟುಂಬವನ್ನು ಟೀಕಿಸುವ ಭರದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಹೇಳಿ ಕಾಂಗ್ರೆಸ್ ನವರು ಸ್ವೀಟ್ ಹಂಚಿದ್ರು. ರಾಹುಲ್ ಗಾಂಧಿಯವರ ಜೀವನಕ್ಕೆ ಒಂದು ಪ್ಲ್ಯಾನ್ ಇಲ್ಲ. ಅವರು ಲಾಕ್‌ಡೌನ್ ಅನ್ ಪ್ಲ್ಯಾನ್ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡಿ ದೇಶ ಬಿಟ್ಟು ಹೊರದೇಶಕ್ಕೆ ಓಡಿ ಹೋಗಿದ್ದರು ಎಂದ ಜೋಶಿ, ರಾಹುಲ್ ಗಾಂಧಿ ಹೋಗಿದ್ದು ಅವರ ಪೂರ್ವಿಕರನ್ನು ನೋಡಲಿಕ್ಕೆ ಎಂದು ಟೀಕೆ ಮಾಡಿದರು.
Kshetra Samachara
10/01/2021 05:13 pm