ಹುಬ್ಬಳ್ಳಿ: ಅವಳಿ ನಗರದ ಮಂದಿಗೆ ಬಿಆರ್‌ಟಿಎಸ್ ಕೊಟ್ಟ ಕಿರಿಕಿರಿ ಅಷ್ಟಿಷ್ಟಲ್ಲ. ಟ್ರಾಫಿಕ್ ಜಾಮ್ ನಿತ್ಯದ ಸಮಸ್ಯೆ. ಇದಲ್ಲದೆ ಕೇವಲ 10 ನಿಮಿಷದ ಮಳೆಯಾದರೆ ಸಾಕು ರಸ್ತೆ ಮೇಲೆ ನದಿಯೇ ಹರಿದಂತಾಗುತ್ತದೆ.
ಈ ವಿಡಿಯೋದಲ್ಲಿ ಹುಬ್ಬಳ್ಳಿ-ಧಾರವಾಡದ ಬಿಆರ್‌ಟಿಎಸ್ ಯೋಜನೆಯ ವೈಫಲ್ಯಗಳನ್ನು ಕಾಣಬಹುದಾಗಿದೆ. ಕೇವಲ ೧೦ ನಿಮಿಷದ ಮಳೆಗೆ ಇಷ್ಟು ಸಮಸ್ಯೆಯಾದರೆ ಮಳೆಗಾಲದಲ್ಲಿ ಸವಾರರು, ಚಾಲಕರ ಪರಿಸ್ಥಿತಿ ದೇವರೇ ಬಲ್ಲ. ಇಂತಹ ಮಹಾ ನದಿಯಲ್ಲಿ ನಮ್ಮ ನಾಯಕರು ಒಮ್ಮೆ ಪ್ರಯಾಣಿಸಬೇಕು. ಅಂದಾಗಲೇ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
09/01/2021 07:35 pm