ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ : ತೆಂಗಿನಕಾಯಿ

ಹುಬ್ಬಳ್ಳಿ: ಗ್ರಾಪಂ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ಸನ್ಮಾನಿಸುವುದಕ್ಕಾಗಿ, 31 ಜಿಲ್ಲೆಗಳಲ್ಲಿ ಜನಸೇವಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿದರು....!

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜನಸೇವಕ ಸಮಾವೇಶಕ್ಕಾಗಿ 5 ತಂಡಗಳನ್ನು ರಚಿಸಲಾಗಿದೆ.

ಮೊದಲ ತಂಡದ ನೇತೃತ್ವವನ್ನು, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, 2 ನೇ ತಂಡದ ನೇತೃತ್ವವನ್ನು ಸಚಿವ ಈಶ್ವರಪ್ಪ, 3, 4 ಮತ್ತು 5 ನೇ ತಂಡದ ನೇತೃತ್ವವನ್ನು ಕ್ರಮವಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಡಾ. ಅಶ್ವತ್ಥನಾರಾಯಣ ವಹಿಸುವರು ಎಂದರು.

ಜ. 11 ರಿಂದ 13ರವರೆಗೆ ಸಮಾವೇಶ ನಡೆಯಲಿದೆ. ಜ. 11 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಮೈಸೂರಿನಲ್ಲಿ ಸಮಾವೇಶಕ್ಕೆ ಚಾಲನೆ ನೀಡುವರು.ನಿತ್ಯ 2 ಜಿಲ್ಲೆಗಳಲ್ಲಿ 2 ಸಮಾವೇಶ ನಡೆಯಲಿವೆ. ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಿದ್ಧತೆಗೂ ಈ ಸಮಾವೇಶದ ಮೂಲಕ ಚಾಲನೆ ನೀಡಲಾಗುವುದು.

ಜ. 17 ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶದ ಸಮಾರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುವರು. ಬೆಳಗಾವಿ ಲೋಕಸಭೆ ಉಪ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಮತ್ತು ಧಾರವಾಡ ಜಿಲ್ಲೆಯ ಜನಸೇವಕ ಸಮಾವೇಶ ಜ. 10 ರಂದು ಬೆಳಗ್ಗೆ ಹುಬ್ಬಳ್ಳಿಯ ಗೋಕುಲ ಗಾರ್ಡನ್ ನಲ್ಲಿ ನಡೆಯಲಿದೆ.ಬಿಜೆಪಿ ಬೆಂಬಲಿತ ಗ್ರಾಪಂನ ನೂತನ 1,216 ಸದಸ್ಯರು ಪಾಲ್ಗೊಳ್ಳವರು ಎಂದರು.

Edited By : Manjunath H D
Kshetra Samachara

Kshetra Samachara

09/01/2021 12:52 pm

Cinque Terre

23.97 K

Cinque Terre

0

ಸಂಬಂಧಿತ ಸುದ್ದಿ