ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಪಂ ಚುನಾವಣೆ: 1,933 ನೂತನ ಸದಸ್ಯರ ಆಯ್ಕೆ

ಧಾರವಾಡ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು 136 ಗ್ರಾಮ ಪಂಚಾಯತಿಗಳಿಗೆ ಯಶಸ್ವಿಯಾಗಿ ಚುನಾವಣೆ ಜರುಗಿದ್ದು, ಅವುಗಳ ಮತ ಎಣಿಕೆಯು ಡಿಸೆಂಬರ್ 30 ರಂದು ಶಾಂತಿಯುತವಾಗಿ ಜರುಗಿದೆ. ಒಟ್ಟು 114 ಜನ ಸದಸ್ಯರು ಅವಿರೋಧ ಆಯ್ಕೆ ಮತ್ತು 1,819 ಜನ ಚುನಾವಣೆಯ ಮೂಲಕ ನೂತನವಾಗಿ ಒಟ್ಟು 1,933 ಜನ ಸದಸ್ಯರು ಗ್ರಾಮ ಪಂಚಾಯಿತಿಗಳಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಡಿಸೆಂಬರ್ 7 ರಂದು ಮೊದಲ ಹಂತದ ಗ್ರಾಮಪಂಚಾಯತ್ ಚುನಾವಣೆಗಳಿಗಾಗಿ ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಮತ್ತು 2ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗಾಗಿ ಡಿಸೆಂಬರ್ 11 ರಂದು ಹುಬ್ಬಳ್ಳಿ, ನವಲಗುಂದ, ಕುಂದಗೋಳ ಮತ್ತು ಅಣ್ಣಿಗೇರಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು.

136 ಗ್ರಾಮ ಪಂಚಾಯತಿಗಳ ಪೈಕಿ 1,952 ಸ್ಥಾನಗಳಿಗೆ ಚುನಾವಣೆ ಜರುಗಿಸಲು ಅಧಿಸೂಚನೆ ಪ್ರಕಟಿಸಲಾಗಿತ್ತು. 19 ಸ್ಥಾನಗಳಿಗೆ ಯಾವುದೇ ನಾಮಪತ್ರಗಳ ಸಲ್ಲಿಕೆಯಾಗದೇ ಖಾಲಿ ಉಳಿದಿವೆ. ಮತ್ತು 114 ಸದಸ್ಯರು ವಿವಿಧ ಗ್ರಾಮ ಪಂಚಾಯಿತಿಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ. 1,819 ಜನ ಸದಸ್ಯರು ಸಾರ್ವತ್ರಿಕ ಚುನಾವಣೆ ಮೂಲಕ ಗ್ರಾಮ ಪಂಚಾಯಿತಿಗಳಿಗೆ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ ಒಟ್ಟು 1,933 ಸದಸ್ಯರು ಆಯ್ಕೆಯಾಗಿದ್ದಾರೆ.

ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಿಗಳ 533 ಸದಸ್ಯ ಸ್ಥಾನಗಳ ಪೈಕಿ 30 ಜನ ಅವಿರೋಧ ಆಯ್ಕೆ, 503 ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 533 ಸದಸ್ಯರ ಪೈಕಿ ಅವಿರೋಧ 30, ಅನುಸೂಚಿತ ಜಾತಿ (ಸಾಮಾನ್ಯ-7, ಮಹಿಳೆ-37) 44, ಅನುಸೂಚಿತ ಪಂಗಡ (ಸಾಮಾನ್ಯ-9, ಮಹಿಳೆ-34) 43, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-56, ಮಹಿಳೆ-73) 129, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-17, ಮಹಿಳೆ-15) 32 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-168, ಮಹಿಳೆ-117) 285 ಸದಸ್ಯರು ಆಯ್ಕೆಯಾಗಿದ್ದಾರೆ.

ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಿಗಳ 47 ಸದಸ್ಯ ಸ್ಥಾನಗಳ ಪೈಕಿ 1 ಜನ ಅವಿರೋಧ ಆಯ್ಕೆ, 46 ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 47 ಸದಸ್ಯರ ಪೈಕಿ ಅವಿರೋಧ 1, ಅನುಸೂಚಿತ ಜಾತಿ (ಸಾಮಾನ್ಯ-1, ಮಹಿಳೆ-4) 5, ಅನುಸೂಚಿತ ಪಂಗಡ (ಸಾಮಾನ್ಯ-1, ಮಹಿಳೆ-4) 5, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-3, ಮಹಿಳೆ-7) 10, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-3) 3 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-15, ಮಹಿಳೆ-9) 24 ಸದಸ್ಯರು ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯತಿಗಳ 373 ಸದಸ್ಯ ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿವೆ. 24 ಜನ ಅವಿರೋಧ ಆಯ್ಕೆ, 337 ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 361 ಸದಸ್ಯರ ಪೈಕಿ ಅವಿರೋಧ 24, ಅನುಸೂಚಿತ ಜಾತಿ (ಸಾಮಾನ್ಯ-3, ಮಹಿಳೆ-26) 29, ಅನುಸೂಚಿತ ಪಂಗಡ (ಸಾಮಾನ್ಯ-3, ಮಹಿಳೆ-25) 28, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-30, ಮಹಿಳೆ-53) 83, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-19, ಮಹಿಳೆ-7) 26 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-119, ಮಹಿಳೆ-76) 195 ಸದಸ್ಯರು ಆಯ್ಕೆಯಾಗಿದ್ದಾರೆ.

ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯತಿಗಳ 340 ಸದಸ್ಯ ಸ್ಥಾನಗಳ ಪೈಕಿ 17 ಜನ ಅವಿರೋಧ ಆಯ್ಕೆ, 323 ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 340 ಸದಸ್ಯರ ಪೈಕಿ ಅವಿರೋಧ 17, ಅನುಸೂಚಿತ ಜಾತಿ (ಸಾಮಾನ್ಯ-14, ಮಹಿಳೆ-32) 46, ಅನುಸೂಚಿತ ಪಂಗಡ (ಸಾಮಾನ್ಯ-4, ಮಹಿಳೆ-27) 31, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-26, ಮಹಿಳೆ-45) 71, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-12, ಮಹಿಳೆ-5) 17 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-110, ಮಹಿಳೆ-65) 175 ಸದಸ್ಯರು ಆಯ್ಕೆಯಾಗಿದ್ದಾರೆ.

ಕುಂದಗೋಳ ತಾಲೂಕಿನ 23 ಗ್ರಾಮಪಂಚಾಯತಿಗಳ 346 ಸದಸ್ಯ ಸ್ಥಾನಗಳ ಪೈಕಿ 21 ಜನ ಅವಿರೋಧ ಆಯ್ಕೆ, 325 ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 346 ಸದಸ್ಯರ ಪೈಕಿ ಅವಿರೋಧ 21, ಅನುಸೂಚಿತ ಜಾತಿ (ಸಾಮಾನ್ಯ-10, ಮಹಿಳೆ-25) 35, ಅನುಸೂಚಿತ ಪಂಗಡ (ಸಾಮಾನ್ಯ-7, ಮಹಿಳೆ-25) 32, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-34, ಮಹಿಳೆ-44) 78, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-10, ಮಹಿಳೆ-9) 19 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-104, ಮಹಿಳೆ-78) 182 ಸದಸ್ಯರು ಆಯ್ಕೆಯಾಗಿದ್ದಾರೆ.

ನವಲಗುಂದ ತಾಲೂಕಿನ 14 ಗ್ರಾಮಪಂಚಾಯತಿಗಳ 204 ಸದಸ್ಯ ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿವೆ. 17 ಜನ ಅವಿರೋಧ ಆಯ್ಕೆ, 180 ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 197 ಸದಸ್ಯರ ಪೈಕಿ ಅವಿರೋಧ 17, ಅನುಸೂಚಿತ ಜಾತಿ (ಸಾಮಾನ್ಯ-5, ಮಹಿಳೆ-13) 18, ಅನುಸೂಚಿತ ಪಂಗಡ (ಸಾಮಾನ್ಯ-1, ಮಹಿಳೆ-14) 15, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-19, ಮಹಿಳೆ-27) 46, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-6, ಮಹಿಳೆ-7) 13 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-62, ಮಹಿಳೆ-43) 105 ಸದಸ್ಯರು ಆಯ್ಕೆಯಾಗಿದ್ದಾರೆ.

ಜಿಲ್ಲೆಯ 7 ತಾಲೂಕಿನ 136 ಗ್ರಾಮ ಪಂಚಾಯಿತಿಗಳ 1,952 ಸ್ಥಾನಗಳ ಪೈಕಿ 19 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೇ ಖಾಲಿ ಉಳಿದಿವೆ. ಒಟ್ಟು 114 ಜನ ಅವಿರೋಧ ಆಯ್ಕೆ, ಮತ್ತು ಚುನಾವಣೆಯ ಮೂಲಕ ಮತದಾನದ ನಂತರ 1,819 ಜನ ಸೇರಿದಂತೆ ಒಟ್ಟು 1,933 ಜನ ನೂತನ ಸದಸ್ಯರು ಆಯ್ಕೆಯಾಗಿದ್ದಾರೆ. 1,933 ರ ಪೈಕಿ 931 ಸಾಮಾನ್ಯ ಹಾಗೂ 1,002 ಮಹಿಳಾ ಸದಸ್ಯರಿದ್ದಾರೆ. ಅನುಸೂಚಿತ ಜಾತಿ (ಸಾಮಾನ್ಯ-40, ಮಹಿಳೆ-145) 185, ಅನುಸೂಚಿತ ಪಂಗಡ (ಸಾಮಾನ್ಯ-26, ಮಹಿಳೆ-137) 163, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-180, ಮಹಿಳೆ-264) 444, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-70, ಮಹಿಳೆ-47) 117 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-615, ಮಹಿಳೆ-409) 1,024 ಸದಸ್ಯರು ನೂತನವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

05/01/2021 06:44 pm

Cinque Terre

25.04 K

Cinque Terre

0

ಸಂಬಂಧಿತ ಸುದ್ದಿ