ನವಲಗುಂದ : ಇಂದು ನವಲಗುಂದ ನಗರದ ಕಾಂಗ್ರೆಸ್ ಮುಖಂಡರಾದ ವಿನೋದ ಅಸೂಟಿ ಅವರ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ್ ಅಭ್ಯರ್ಥಿಗಳಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಈ ವೇಳೆ ಇಬ್ರಾಹಿಂಪುರ ಗ್ರಾಮದ ಚುನಾಯಿತ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಕುರ್ತಕೋಟಿ, ಮಲ್ಲವ್ವ ದೊಡ್ಡಮನಿ, ಹನಮವ್ವ ಉಂಡಿ, ಪ್ರಭಾವತಿ ಜೋಗಿ, ಶಿವಾನಂದ ಚಿಪ್ಪಾಡಿ, ಭೀಮಪ್ಪ ವಂಕಣ್ಣವರ, ಲಲಿತಾ ತಳವಾರ, ಖನ್ನೂರ ಗ್ರಾಮದ ಅಭ್ಯರ್ಥಿಗಳಾದ ರಾಜುಗೌಡ ಗೌಡಪ್ಪಗೌಡ, ಶಾಂತವ್ವ ಚಲವಾದಿ, ಆಯಟ್ಟಿ ಗ್ರಾಮದ ಉಮಾಶ್ರೀ ಕಾಳೆ, ಬಾಬು ನದಾಫ್, ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ವಿನೋದ ಅಸೂಟಿ ಅವರು ಶುಭಕೋರಿದರು. ಈ ಸಂದರ್ಭದಲ್ಲಿ ನವಲಗುಂದ ಬ್ಲಾಕ್ ಅಧ್ಯಕ್ಷರು ವರ್ಧಮಾನಗೌಡ ಲ ಹೀರೇಗೌಡ್ರ, ನವಲಗುಂದ ಕುರುಬ ಸಮಾಜದ ಮಾಜಿ ಅಧ್ಯಕ್ಷರು ಹನಮಂತಪ್ಪ ಇಬ್ರಾಹಿಂಪುರ ಮತ್ತು ಪಕ್ಷದ ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು...
Kshetra Samachara
04/01/2021 09:14 pm