ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠ.ಒಂದಿಲ್ಲೊಂದು ರೀತಿಯ ಗೊಂದಲದಲ್ಲಿ ಸಿಲುಕಿಕೊಂಡು ಸುದ್ಧಿಯಾಗುತ್ತಲೇ ಇರುವಂತ ಪ್ರತಿಷ್ಠಿತ ತಾಣ.ಈ ಮಠ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದೇನೋ ನಿಜ. ಆದ್ರೇ ಈ ಕಾರ್ಯದ ಹಿಂದೇ ಪರ ವಿರೋಧ ನಿಲುವುಗಳು ಗೋಚರಿಸುತ್ತಿದೆ.ಈ ಎಲ್ಲ ಬೆಳವಣಿಗೆಯಿಂದ ಮಠದ ಪರಿಸ್ಥಿತಿ ಕಬ್ಬಿಣದ ಕಡಲೆಯಾಗಿದೆ.ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ವಾಣಿಜ್ಯನಗರಿ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ.
ದೇಶದಲ್ಲಿ ತನ್ನದೇ ಕೀರ್ತಿಯನ್ನು ಹೊಂದಿರುವ ಕೆಎಲ್ಇ ಸಂಸ್ಥೆ ಮೂರುಸಾವಿರ ಮಠದ ಭೂಮಿಯನ್ನು ದಾನವಾಗಿ ಪಡೆದುಕೊಂಡು ವೈದ್ಯಕೀಯ ವಿದ್ಯಾಲಯ ಸ್ಥಾಪನೆಗೆ ಮುಂದಾಗಿದ್ದು,ಭಕ್ತರಲ್ಲಿ ಭಾರಿ ವಿರೋಧವಂತೂ ವ್ಯಕ್ತವಾಗುತ್ತಿದೆ.ಮಠದ ಆಸ್ತಿಯನ್ನು ದಾನ ಪಡೆದಿರುವುದು ಖಂಡನೀಯವಾಗಿದೆ ಕೂಡಲೇ ಕೆಎಲ್ಇ ಸಂಸ್ಥೆಯು ದಾನವಾಗಿ ಪಡೆದ ಭೂಮಿಯನ್ನು ಮಠಕ್ಕೆ ಮರಳಿಸುವಂತೆ ಮೂರುಸಾವಿರ ಮಠದ ಭಕ್ತರು ಒತ್ತಾಯಿಸಿದರು.
ಕೆಲವು ದಿನಗಳ ಹಿಂದೆಯಷ್ಟೇ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮಿಜೀ ನನ್ನ ಜೀವ ಇರುವವರೆಗೂ ಮೂರುಸಾವಿರಮಠದ ಆಸ್ತಿ ಹಾನಿಯಾಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಶ್ರೀಮಠದ ಭಕ್ತರು ಕೆಎಲ್ಇ ಸಂಸ್ಥೆ ವಿರುದ್ಧ ಗುಡುಗಿದ್ದಾರೆ.ಶ್ರೀ ಮಠದಿಂದ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾದರೇ ನಾವೆಲ್ಲರೂ ಜೋಳಿಗೆ ತೆಗೆದುಕೊಂಡು ಬಿಕ್ಷೆ ಬೇಡಿ ಆರ್ಥಿಕ ವ್ಯವಸ್ಥೆ ಸರಿಪಡಿಸುತ್ತೇವೆ ಕೆಎಲ್ಇ ಸಂಸ್ಥೆಯ ಆಶ್ರಯದಲ್ಲಿ ಮೆಡಿಕಲ್ ಕಾಲೇಜು ಬೇಡ ಶ್ರೀಮಠದಿಂದ ಬೇಕಿದ್ದರೇ ಮೆಡಿಕಲ್ ಕಾಲೇಜು ಸ್ಥಾಪಿಸಿ ಎಂಬುವಂತ ಕೂಗು ಕೇಳಿ ಬರುತ್ತಿದೆ. ಇನ್ನೂ ಮೂರುಸಾವಿರ ಮಠ ತುಂಬಾ ಆರ್ಥಿಕ ತೊಂದರೆಯಲ್ಲಿದೆ.ಮಠದಲ್ಲಿ ನಡೆಯುವ ನಿರಂತರ ದಾಸೋಹಕ್ಕೂ ಸಂಕಷ್ಟ ಪರಿಸ್ಥಿತಿ ಇದೆ.ಹೀಗಿರುವಾಗ ಕೆಎಲ್ಇ ಸಂಸ್ಥೆಯು ಮಠಕ್ಕೆ ಯಾವುದೇ ಸಹಾಯ ಹಸ್ತ ಚಾಚದೇ ತರಾತುರಿಯಲ್ಲಿ ಮಠದ ಆಸ್ತಿಯನ್ನು ದಾನವಾಗಿ ಪಡೆದಿದ್ದು,ಭಕ್ತರಲ್ಲಿ ಗೊಂದಲವನ್ನು ಸೃಷ್ಟಿಸಿದೆ ಎಂದು ಭಕ್ತರು ಕೆಎಲ್ಇ ಸಂಸ್ಥೆ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೆಎಲ್ಇ ಸಂಸ್ಥೆ ಹುಬ್ಬಳ್ಳಿಯಲ್ಲಿಯೇ ನೂರಾರು ಎಕರೆ ಆಸ್ತಿಯನ್ನು ಹೊಂದಿದೆ.ಹೀಗಿದ್ದರೂ ಮಠದ ಆಸ್ತಿಯನ್ನು ಏಕೆ ದಾನವಾಗಿ ಪಡೆದಿದೆ ಎಂಬುವುದು ಮಠದ ಭಕ್ತರಿಗೆ ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಕೆಎಲ್ಇ ಸಂಸ್ಥೆ ಈ ಗೊಂದಲಗಳಿಗೆ ತೆರೆ ಎಳೆಯಬೇಕಾದರೇ ಮಠದ ಆಸ್ತಿಯನ್ನು ಮಠಕ್ಕೆ ಮರಳಿಸಿ ಸಂಸ್ಥೆ ತನ್ನ ಹೆಸರನ್ನು ಉಳಿಸಿಕೊಳ್ಳಬೇಕು ಎಂಬುವುದು ಭಕ್ತರ ಒತ್ತಾಸೆಯಾಗಿದೆ.ಒಟ್ಟಿನಲ್ಲಿ ಪರ ವಿರೋಧದ ನಡುವೆ ಕೆಎಲ್ಇ ಸಂಸ್ಥೆ ಭೂಮಿ ಪೂಜೆ ಮಾಡಿದ್ದು,ಮೆಡಿಕಲ್ ಕಾಲೇಜು ನಿರ್ಮಾಣದ ಕನಸು ನನಸಾಗುವುದೋ ಇಲ್ಲವೋ ಕಾದು ನೋಡಬೇಕಿದೆ.
Kshetra Samachara
01/01/2021 05:22 pm