ಹುಬ್ಬಳ್ಳಿ: ಹುಬ್ಬಳ್ಳಿ ಮೂರು ಸಾವಿರ ಮಠದ ಆಸ್ತಿ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ವಾಮಿಜಿಗಳ ನಡುವೆ ತಿಕ್ಕಾಟ ನಡೆಯುತ್ತಿದ್ರೆ, ಇತ್ತ ಕೆಎಲ್ ಇ ಸಂಸ್ಥೆ ವಿರುದ್ದ ಭಕ್ತರ ಬಳಿಕ ಈಗ ವೀರಶೈವ ಲಿಂಗಾಯತ ಒಳಪಂಗಡಗಳು ಸಿಡಿದೆದ್ದಿರೊದು , ಕೆಎಲ್ ಇ ಸೊಸೈಟಿ ಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ..
ಹುಬ್ಬಳ್ಳಿಯ ಗಬ್ಬೂರು ಬಳಿ ಕೆಎಲ್ ಇ ಸೊಸೈಟಿ ಗೆ ಮೆಡಿಕಲ್ ಕಾಲೇಜು ಕಟ್ಟಲು ಮೂರು ಸಾವಿರ ಮಠದ ಭೂಮಿಯನ್ನು ದಾನವಾಗಿ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಆರ್ಥಿಕ ಸದೃಡವಾಗಿರುವ ಕೆಎಲ್ ಇ ಸಂಸ್ಥೆ ಗೆ ಉಚಿತ ವಾಗಿ 500 ಕೋಟಿ ಬೆಲೆ ಬಾಳುವ ಆಸ್ತಿಯನ್ನ ದಾನವಾಗಿ ನೀಡಿರುವುದಕ್ಕೆ ದಿಂಗಾಲೇಶ್ವರ ಶ್ರೀ ತೀವ್ರ ವಿರೋದ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಭಕ್ತರು ಕಾನೂನು ಸಮರ ನಡೆಸುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಈಗ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕೆ ಎಲ್ ಇ ವಿರುದ್ದ ಸಮರ ಸಾರುವ ಎಚ್ಚರಿಕೆ ನೀಡಿದೆ.
ಕೆಎಲ್ ಇ ಸೊಸೈಟಿಯವರಿಗೆ ಪತ್ರ ಬರೆದಿರುವ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮೆಡಿಕಲ್ ಕಾಲೇಜು ಆರಂಭ ಮಾಡಿದ್ರೆ ತಮ್ಮ 6 ಬೇಡಿಕೆಗಳನ್ನ ಒಪ್ಪಿಕೊಂಡು ಷರತ್ತುಬದ್ದ ನಿರ್ಣಯಕ್ಕೆ ಬದ್ದವಾಗಿರಬೇಕು, ಇಲ್ಲದಿದ್ದರೆ ಕೆಎಲ್ ಇ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದಿಂದ 6 ಷರತ್ತುಗಳನ್ನ ಹಾಕಲಾಗಿದ್ದು, ಇದು ಕೆಎಲ್ ಇ ಸಂಸ್ಥೆಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು,
ಇವರ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಲು, ಮೆಡಿಕಲ್ ಕಾಲೇಜಿಗೆ ಕನಿಷ್ಠ 150 ಸೀಟುಗಳು ಲಬಿಸಲಿದ್ದು ಅದರಲ್ಲಿ 25% ಸೀಟುಗಳನ್ನ ಮಠಕ್ಕೆ ಉಚಿತವಾಗಿ ನೀಡಬೇಕು.
ಕಾಲೇಜಿನಲ್ಲಿ ಉದ್ಯೋಗ ನೀಡುವಾಗ ಧಾರವಾಡ ಜಿಲ್ಲೆಯವರಿಗೆ ಹೆಚ್ಚಿನ ಪ್ರಾತಿನಿದ್ಯ ನೀಡಬೇಕು. ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ಉದ್ಯೋಗ ನೀಡಬೇಕು.
ಮೆಡಿಕಲ್ ಸೀಟು ಹಂಚುವಾಗ ಲಿಂಗಾಯತ ಸಮಾಜಕ್ಕೆ 25% ಸೀಟುಗಳನ್ನ ರಿಯಾಯಿತಿ ನೀಡಬೇಕು. ವೀರಶೈವ ಲಿಂಗಾಯತ ಒಳ ಪಂಗಡಗಳ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುವುದು ಹಾಗೂ ಸಮಾಜದ ಇತರರಿಗು ರಿಯಾಯಿತಿ ಒದಗಿಸಬೇಕು.
ಒಡಂಬಡಿಕೆ ಪತ್ರದಂತೆ ಜಿಲ್ಲೆಯ ಎಲ್ಲಾ ಒಳಪಂಗಡಗಳ ಹಿರಿಯರ ಸಮಿತಿ ರಚಿಸಬೇಕು. ಹಿರಿಯ ಜನಪ್ರತಿನಿಧಿಗಳ ಕೋರ್ ಕಮೀಟಿ ರಚಿಸಿ, ಅದರಲ್ಲಿ ಎರಡನೇ ಹಂತದ ಯುವ ನಾಯಕರನ್ನ ಸೇರಿಸಬೇಕೆಂದು ಆರು ಷರತ್ತುಗಳನ್ನು ಕೆಎಲ್ ಇ ಸಂಸ್ಥೆ ಗೆ ಹಾಕಿದ್ದಾರೆ..
ಈಗಾಗಲೇ ಕೆಎಲ್ ಇ ವಿರುದ್ದ ಸಮರ ಸಾರಿರುವ ದಿಂಗಾಲೇಶ್ವರ ಶ್ರೀಗಳು ಯಾವುದೇ ಕಾರಣಕ್ಕು ಮಠದ ಆಸ್ತಿಯನ್ನ ಪರಬಾರೆ ಮಾಡಲು ಬಿಡಲ್ಲ, ಆಸ್ತಿ ಪಡೆಯಲು ನಿರಂತರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದಿಂದ ಬರೆದಿರುವ ಪತ್ರ ಈಗ ಕೆಎಲ್ ಇ ಸೊಸೈಟಿ ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
Kshetra Samachara
31/12/2020 02:34 pm